ಮತ್ತೊಮ್ಮೆ ಕೋರೆಗಾಂವ ಘಟನೆ ನಡೆದೀತು

tdl 20-1a
ತೇರದಾಳ ಪಟ್ಟಣದ ಬಸವೇಶ್ವರ ವೃತ್ತ ಬಳಿಯಲ್ಲಿ ದಲಿತ ಬಾಂಧವರು ಕೇಂದ್ರ ಸಚಿವ ಅಮಿತ್ ಷಾ ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಿದರು. ಬೌದ್ಧಧರ್ಮಗುರು ಬೋಧಿಪ್ರಜ್ಞಾ, ಪಿ.ಎಸ್. ಮಾಸ್ತಿ, ಗೌತಮ ರೋಡಕರ ಇತರರಿದ್ದರು.
Published on

ತೇರದಾಳ: ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅಮಿತ್ ಷಾ ಅವರ ವಿರುದ್ಧ ಪಟ್ಟಣದಲ್ಲಿ ಶುಕ್ರವಾರ ದಲಿತ ಸಮಾಜದವರು ತಕ್ಷಶಿಲಾ ಬುದ್ಧವಿಹಾರ ಇಂಟರ್‌ನ್ಯಾಷನಲ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ, ಧರ್ಮಗುರು ಬೋಧಿಪ್ರಜ್ಞಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಬಸವೇಶ್ವರ ವೃತ್ತ ಬಳಿ ಕೇಂದ್ರ ಸಚಿವ ಅಮಿತ್ ಷಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅಂಬೇಡ್ಕರರು ಸಂವಿಧಾನ ರಚನೆಯಿಂದಲೇ ನೀವು ಸಂಸತ್‌ನಲ್ಲಿ ಕುಳಿತಿದ್ದೀರೆಂಬುದು ಅರಿವಿರಬೇಕು. ಒಬ್ಬ ಶಿಕ್ಷಣವಂತರಾದ ನೀವು ಸಂವಿಧಾನ ಶಿಲ್ಪಿ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಅಂಬೇಡ್ಕರ್ ಕೇವಲ ದಲಿತರಿಗಷ್ಟೇ ಸಿಮೀತಗೊಂಡ ವ್ಯಕ್ತಿ ಅಲ್ಲ. ಅವರೊಬ್ಬ ಶಕ್ತಿ ಆಗಿದ್ದಾರೆ. ಅಂಬೇಡ್ಕರ್ ಬಗ್ಗೆ ಯಾವುದೇ ಮಠಾಧೀಶರಾಗಲಿ ಎಂತಹ ಸಚಿವರೇ ಆಗಲಿ ಹಗುರವಾಗಿ, ಅವಹೇಳನಕಾರಿಯಾಗಿ ಹೇಳಿಕೆ ನೀಡಿದರೆ ದೇಶದಲ್ಲಿ ಮೊತ್ತೊಮ್ಮೆ ಕೋರೆಗಾಂವ ಘಟನೆ ನಡೆದೀತು ಎಚ್ಚರಿಕೆ ಇರಲಿ ಎಂದು ಬೋಧಿಪ್ರಜ್ಞಾ ಹೇಳಿದರು.

ಮುಖಂಡ ಪಿ.ಎಸ್. ಮಾಸ್ತಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಹನುಮಂತ ರೋಡನ್ನವರ, ಹಾಲಿ ಸದಸ್ಯ ಶೆಟ್ಟೆಪ್ಪ ಸುಣಗಾರ, ಮಾಜಿ ಸದಸ್ಯರಾದ ಗೌತಮ ರೋಡಕರ, ರಾಜೇಸಾಬ ನಗಾರ್ಜಿ, ದಯಾನಂದ ಕಾಳೆ, ಸಿದ್ದು ದೊಡಮನಿ, ಲಕ್ಷ್ಮಣ ಮಾಸ್ತಿ, ಸದಾಶಿವ ಸಿಂಗೆ, ಗೋಪಾಲ ಸಿಂಗೆ, ಸಂಜು ಹಾಡಕರ, ಮಂಜುನಾಥ ಸರಿಕರ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net