ಕೋರೆ ಸೊಸೈಟಿಗೆ 25.30 ಕೋಟಿ ರೂ. ಲಾಭ

Kore
Published on

ಮಾಂಜರಿ: ಅಂಕಲಿ ಗ್ರಾಮದ ಡಾ.ಪ್ರಭಾಕರ ಕೋರೆ ಕೋ&ಆಪ್​ ಕ್ರೆಡಿಟ್​ ಸೊಸೈಟಿ (ಬಹುರಾಜ್ಯ) 25.30 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆ ಅಧ್ಯಕ್ಷ ಮಹಾಂತೇಶ ಪಾಟೀಲ ತಿಳಿಸಿದರು.

ಸಂಸ್ಥೆಯ ಆಡಳಿತ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿ ಶ್ರೀದಲ್ಲಿ ಸಂಸ್ಥೆಯು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ 30ಕ್ಕೂ ಅ-ಧಿಕ ಶಾಖೆ ಪ್ರಾರಂಭಿಸಲಿದೆ ಹಾಗೂ ಗೋವಾ ರಾಜ್ಯಕ್ಕೂ ಸೇವೆ ವಿಸ್ತರಿಸಲಿದೆ. 1989ರಲ್ಲಿ ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ ಅಮತ ಹಸ್ತದಿಂದ ಪ್ರಾರಂಭವಾಗಿ ಸಂಸ್ಥಾಪಕ ಡಾ.ಪ್ರಭಾಕರ ಕೋರೆ ಮಾರ್ಗದರ್ಶನದಲ್ಲಿ ಮತ್ತು ಅಮಿತ್​ ಕೋರೆ ಹಾಗೂ ಪ್ರೀತಿ ದೊಡವಾಡ ನೇತತ್ವದಲ್ಲಿ ಸಂಸ್ಥೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಸಂತ್ವ ಕಟ್ಟಡ, ನಿವೇಶನ ಗುರಿ:

ಸಂಸ್ಥೆ ಒಟ್ಟು 55 ಶಾಖೆ, 97727 ಸದಸ್ಯರು, 4 ಕೋಟಿ ರೂ.ಗೂ ಅಧಿಕ ಷೇರು ಬಂಡವಾಳ, 141 ಕೋಟಿ ರೂ. ನಿಧಿ, 1511 ಕೋಟಿ ರೂ. ಠೇವಣಿ, 580 ಕೋಟಿ ರೂ. ಗುಂತಾವಣಿ, 1657 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 1064 ಕೋಟಿ ರೂ. ಸಾಲ ವಿತರಿಸಿದೆ. ಶೇ.92 ಸಾಲ ವಸೂಲಿ ಮಾಡಲಾಗಿದೆ. 22076 ಕೋಟಿ ರೂ.ಗಿಂತ ಹೆಚ್ಚು ವಾರ್ಷಿಕ ವಹಿವಾಟು ನಡೆಸಿದೆ. ಸಂಸ್ಥೆಯಡಿ 25 ಕೋಟಿ ರೂ. ಮೌಲ್ಯದ 8 ಕಟ್ಟಡವಿದ್ದು, ಭವಿಷ್ಯದಲ್ಲಿ ಶಾಖೆಗಳಿಗೆ ಸ್ವಂತ ನಿವೇಶನ ಹಾಗೂ ಕಟ್ಟಡ ಖರೀದಿಸುವ ಗುರಿಯಿದೆ ಎಂದು ಮಾಹಿತಿ ನೀಡಿದರು.

ಸ್ಪರ್ಧಾತ್ಮಕ ಠೇವಣಿ, ಸಾಲದ ಬಡ್ಡಿದರ:

ಸಂಸ್ಥೆಯು ಸ್ಪರ್ಧಾತ್ಮಕ ಠೇವಣಿ ಮತ್ತು ಸಾಲದ ಬಡ್ಡಿದರ ಅಳವಡಿಸಿಕೊಂಡಿದೆ. ಸುಮಾರು 200 ಪವರ್​ ಕಾರ್ಟ್​, 5 ಬೃಹತ್​ ಕಬ್ಬು ಕಟಾವು ಯಂತ್ರ ಸೇರಿ ಇತರ ವಾಹನಗಳಿಗೆ ಕಡಿಮೆ ಬಡ್ಡಿದರದಲ್ಲಿ ವಾಹನ ಸಾಲ, ಗೃಹಸಾಲ, 900 ರೆತ ಸದಸ್ಯರಿಗೆ ಏತ ನೀರಾವರಿ ಸಾಲ, ತ್ವರಿತ ಬಂಗಾರ ಸಾಲ ನೀಡಿದ್ದೇವೆ. ಸದಸ್ಯರಿಗೆ ಸ್​ೇ ಲಾಕರ್​ ವ್ಯವಸ್ಥೆ, ಮೊಬೆಲ್​ ರೀಚಾರ್ಜ್​, ಪ್ಯಾನ್​ ಕಾರ್ಡ್​, ಪಾಸ್​ಪೋರ್ಟ್​, ಇ&ಸ್ಟ್ಯಾಂಪ್​, ಆರ್​ಟಿಸಿ, ಪ್ರಯಾಣ ಟಿಕೆಟ್​ ಬುಕ್ಕಿಂಗ್​, ಆರ್​ಟಿಜಿಎಸ್​ ಮತ್ತು ಎನ್​ಇಎ್​ಟಿ ಸೌಲಭ್ಯವಿದೆ ಎಂದು ವಿವರಿಸಿದರು.

ಪ್ರಗತಿಗೆ ಸಿಬ್ಬಂದಿ, ಸದಸ್ಯರ ಸಹಕಾರ ಕಾರಣ:

ಎಲ್ಲ ಶಾಖೆಗಳು ಲಾಭದಲ್ಲಿದ್ದು, ಆಡಳಿತ ಮಂಡಳಿ, ಶಾಖೆಗಳ ಸಲಹಾ ಸಮಿತಿಗಳ ನಿಸ್ವಾರ್ಥ ಸೇವೆ, ಸಿಬ್ಬಂದಿಯ ಸತತ ಪ್ರಯತ್ನ ಹಾಗೂ ಸಂಸ್ಥೆಯ ಸದಸ್ಯರ ಸಹಕಾರವೇ ಪ್ರಗತಿಗೆ ಕಾರಣ. ಸದಸ್ಯರಿಗೆ 1 ಲ ರೂ. ಮೊತ್ತದ ಅಪಘಾತ ವಿಮೆ ನೀಡುತ್ತದೆ. ಸಾಮಾನ್ಯ ಆರೋಗ್ಯ ಮತ್ತು ಜೀವ ವಿಮೆ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸದಸ್ಯರಿಗೆ ಆರೋಗ್ಯ ಸೇವೆ ನೀಡುತ್ತಿದೆ. 5000ಕ್ಕೂ ಅಧಿಕ ಜೀವ ಮತ್ತು ಸಾಮಾನ್ಯ ವಿಮೆ ಪಾಲಿಸಿ ಮಾರಾಟ ಮಾಡಿ 68ಕ್ಕೂ ಅಧಿಕ ವಿಮೆದಾರರಿಗೆ 19 ಲ ರೂ. ಪರಿಹಾರ ನೀಡಲಾಗಿದೆ. ಸಿಬ್ಬಂದಿಗೆ ಖಾಸಗಿ ಪಿಂಚಣಿ ಯೋಜನೆ ಇದೆ. 360ಕ್ಕೂ ಅಧಿಕ ಸಿಬ್ಬಂದಿ ಹೊಂದಿದೆ. 200ಕ್ಕೂ ಜನರಿಗೆ ವೇತನ ಶ್ರೇಣಿ ಕಾಯಂಗೊಳಿಸಲಾಗಿದೆ. ಸಂಸ್ಥೆಯಲ್ಲಿ ಒಟ್ಟು 64 ಪಿಗ್ಮಿ ಸಂಗ್ರಾಹಕರು ಇದ್ದಾರೆ ಎಂದು ತಿಳಿಸಿದರು.

ಸಂಸ್ಥೆ ಉಪಾಧ್ಯ ಸಿದ್ದಗೌಡ ಮಗದುಮ, ನಿರ್ದೇಶಕಿ ಪ್ರೀತಿ ದೊಡವಾಡ, ನಿರ್ದೇಶಕರಾದ ಮಲ್ಲಿಕಾರ್ಜುನ ಕೋರೆ, ಅಣ್ಣಾಸಾಬ ಸಂಕೇಶ್ವರಿ, ಬಸನಗೌಡ ಆಸಂಗಿ, ಸುಕುಮಾರ ಚೌಗಲೆ, ಪಿಂಟು ಹಿರೇಕುರಬರ, ಅಮಿತ್​ ಜಾಧವ, ಪ್ರುಲ ಶೆಟ್ಟಿ, ಅಶೋಕ ಚೌಗಲಾ, ಬಾಳಪ್ಪ ಉಮರಾಣೆ, ಅನಿಲ ಪಾಟೀಲ, ಶೋಭಾ ಜಕಾತೆ, ಶೆಲಜಾ ಪಾಟೀಲ, ಪಾರ್ವತಿ ಧರನಾಯಕ, ಜಯಶ್ರೀ ಮೇದಾರ, ಶ್ರೀಕಾಂತ ಉಮರಾಣೆ, ವಿವೇಕಾನಂದ ಕಮತೆ ಮತ್ತು ವ್ಯವಸ್ಥಾಪಕ ನಿರ್ದೇಶಕ ದೇವೇಂದ್ರ ಕರೋಶಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net