

ಬೆಳಗಾವಿ: ನಗರದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ೭೬ನೇ ಜನ್ಮದಿನದ ಅಂಗವಾಗಿ ಅಗಸ್ಟ್ ೧ರಿಂದ ೫ ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಉಚಿತ ರಕ್ತದಲ್ಲಿನ ಸಕ್ಕರೆ(ಬ್ಲಡ್ ಶುಗರ್) ಅಂಶ, ಹೆಪಟೈಟಿಸ್ ಬಿ, ಲಿವರ್ ಫೈಬ್ರೊಸ್ಕ್ಯಾನ್ , ಇಸಿಜಿ ಹಾಗೂ ಸಾಮಾನ್ಯ ಒಪಿಡಿ ಸಮಾಲೋಚನೆ ಮತ್ತು ವೈದ್ಯರೊಂದಿಗೆ ಸಮಾಲೋಚನೆಯನ್ನು ಉಚಿತವಾಗಿ ನೆರವೇರಿಸಲಾಗುತ್ತದೆ. ಆದ್ದರಿಂದ ಆಸಕ್ತರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕೆಎಲ್‌ಇ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ದಯಾನAದ (ಕರ್ನಲ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.