ಅಣಿವೀರಭದ್ರೇಶ್ವರ ಭವ್ಯ ರಥೋತ್ಸವ

IMG_20240311_214606
Published on

ಕಾಳಗಿ: ಕೋರವಾರದ ಶ್ರೀ ಅಣಿವೀರಭದ್ರೇಶ್ವರ ಭವ್ಯ ರಥೋತ್ಸವ ಸೋಮವಾರ ರಾತ್ರಿ ಸಹಸ್ರಾರು ಭಕ್ತರ ಜೈಘೋಷಣೆಗಳ ಮಧ್ಯೆ ನೆರವೇರಿತು. ಜಾತ್ರೆ ನಿಮಿತ್ತ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಬೆಳಗ್ಗೆ ಅಣಿವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ, ಮಹಾ ಮಂಗಳಾರತಿ ಜರುಗಿತು. ಅಲಂಕೃತ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೋರವಾರ ಗ್ರಾಮದಿಂದ ನಂದಿಧ್ವಜ, ಕುಂಭ, ಕಳಸ, ಡೊಳ್ಳು ವಾಧ್ಯ ಮೇಳದೊಂದಿಗೆ ಮೆರವಣಿಗೆ ದೇವಸ್ಥಾನ ತಲುಪಿತು. ಪುರವಂತರ ಸೇವೆಯೊಂದಿಗೆ ರಥೋತ್ಸವಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಜೈ ಘೋಷಗಳನ್ನು ಮೊಳಗಿಸಿ, ಉತ್ತತ್ತಿ, ಖಾರೀಕ್, ನಾಣ್ಯ, ಹೂವು, ಹಣ್ಣು ತೆರಿಗೆ ಅರ್ಪಿಸಿ, ಭಕ್ತಿ ಸಮರ್ಪಿಸಿದರು.
ಭಾನುವಾರ ರಾತ್ರಿಯಿಂದ ಸೋಮವಾರದವರೆಗೆ ಶ್ರೀ ಅಣಿವೀರಭದ್ರೇಶ್ವರ ಪಲ್ಲಕ್ಕಿ, ಪುರವಂತರು, ಸಹಸ್ರಾರು ಭಕ್ತರು ಅಗ್ನಿ ಪ್ರವೇಶ ಮಾಡುವ ಮೂಲಕ ಹಕೆ ತೀರಿಸಿದರು.
ದೇವಸ್ಥಾನ ಸಮಿತಿ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಘಮಾವತಿ ರಾಠೋಡ್, ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗ ಕ್ಷೇಮಶೆಟ್ಟಿ, ಕಂದಾಯ ನಿರೀP್ಷÀಕ ಮಂಜುನಾಥ ಮಹಾರುದ್ರ, ಗ್ರಾಮ ಲೆಕ್ಕಿಗ ಸಂತೋಷ ಮಾನವಿಕರ, ಅರ್ಚಕ ಧನಂಜಯ್ಯ ಹಿರೇಮಠ, ಸೋಮಶೇಖರ ಕಂಠಿ, ಅಣವೀರಯ್ಯ ಸಾಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net