

ಬೂದಿಕೋಟೆ: ಕೋಳಿ ಮಾಂಸದಲ್ಲಿ ಮಹಾಮಾರಿ ಕರೊನಾ ವೈರಸ್ ಇದೆ ಹಾಗೂ ಮಾಂಸ ತಿನ್ನುವುದರಿಂದ ಈ ರೋಗ ಬರುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರಿಂದ ಸಾಕಣೆದಾರರು ಆತಂಕಕ್ಕೆ ಒಳಗಾಗಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಸುಮಾರು 10 ಕಂಪನಿಗಳ 300ಕ್ಕೂ ಹೆಚ್ಚು ಕೋಳಿ ಾರಂಗಳಿವೆ. ನೂರಾರು ಸಾಕಣೆದಾರರ ಕೋಳಿಗಳನ್ನು ಕಂಪನಿಯವರು ಖರೀದಿಸದಿರುವುದರಿಂದ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಾರಂಗಳಲ್ಲಿ ಕೋಳಿ ಮಾಂಸದ ಬೆಲೆ ಕೆಜಿಗೆ 80 ರೂ.ಇದ್ದದ್ದು 30 ರೂ.ಗೆ ಕುಸಿದಿದೆ.
ಮಧ್ಯವರ್ತಿಗಳಿಗೆ ಲಾಭ: ಕಂಪನಿಗಳಿಂದ ಕಡಿಮೆ ಬೆಲೆಗೆ ಕೋಳಿ ಪಡೆಯುವ ಡೀಲರ್ಸ್, ಮಧ್ಯವರ್ತಿಗಳ ಮೂಲಕ ಚಿಕನ್ ಮಾರಾಟಗಾರರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಅಂಗಡಿಗಳಲ್ಲಿ ಈಗಲೂ ಪ್ರತಿ ಕಿಲೋ ಚಿಕನ್ ಸುಮಾರು 160 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಸಾಕಣೆದಾರರಿಗೆ ಬಹು ದೊಡ್ಡ ಹೊಡೆತ ಬೀಳುತ್ತಿದ್ದು, ಮಧ್ಯವರ್ತಿಗಳು ಲಾಭ ಪಡೆಯುತ್ತಿದ್ದಾರೆ ಅನ್ನುವುದು ಹಲವರ ಅಭಿಪ್ರಾಯ.
ಕುರಿ ಮಾಂಸದೆಡೆ ಒಲವು: ಮಾಂಸ ಪ್ರಿಯರು ಕುರಿ ಮಾಂಸದ ಕಡೆ ಒಲವು ತೋರಿದ್ದು, ಬೇಡಿಕೆ ಹೆಚ್ಚಿದೆ. ಪ್ರತಿ ಕೆಜಿಗೆ 520 ರೂ.ಗಳಿಗಿದ್ದ ಬೆಲೆ 560 ರೂ.ಗೆ ಹೆಚ್ಚಿಸಿದ್ದಾರೆ.