

ಮಂಗಳೂರು: ವಿಶ್ವ ಹಿಂದೂ ಪರಿಷದ್ ಸನಾತನ ಸಂಸ್ಕೃತಿಯ ರಕ್ಷಣೆಗೆ ಕಟಿಬದ್ರವಾಗಿದ್ದು, ಸಮಸ್ತ ಹಿಂದು ಸಮಾಜವನ್ನು ಒಗ್ಗೂಡಿಸುವ ದೃಢಸಂಕಲ್ಪ ಮಾಡುವ ಹಿನ್ನೆಲೆಯಲ್ಲಿ ಮಾ.19ರಂದು ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯದಿಂದ ಕುತ್ತಾಗಿನ ಕೊರಗಜ್ಜನ ಆದಿ ಸನ್ನಿಧಿಗೆ ಅದಿಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಚಾರ ಪುಮುಖ್ ಪ್ರದೀಪ್ ಸರಿಪಲ್ಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷಗಳ ಹಿಂದೆ ನಮ್ಮ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಸಂದರ್ಭದಲ್ಲಿ ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯದಿಂದ ಕುತ್ತಾಗಿನ ಕೊರಗಜ್ಜನ ಆದಿ ಸನ್ನಿಧಿಗೆ ಪಾದಯಾತ್ರೆ ನಡೆಸುವುದರ ಮೂಲಕ ದೈವ ದೇವರುಗಳ ಬಗ್ಗೆ, ಭಕ್ತಿ, ಶ್ರದ್ಧೆ ಮೂಡಿಸುವ ಪವಿತ್ರ ಕಾರ್ಯ ಮಾಡಿದೆ. ಹಿಂದೂ ವಿರೋಧಿ ಕೃತ್ಯಗಳು ಮಾಯವಾಗಿ, ಸಮಸ್ತ ಹಿಂದೂ ಸಮಾಜ ಐಕ್ಯತೆಯ ಜೊತೆಗೆ ಲೋಕಕಲ್ಯಾಣದ ಸದುದ್ದೇಶದಿಂದ ಮಾ.19ರ ಬೆಳಿಗ್ಗೆ 6 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ಕ್ಷೇತ್ರದಲ್ಲಿ ಸಾಮೂಹಿಕ ಸಂಕಲ್ಪ ಪ್ರಾರ್ಥನೆಯೊಂದಿಗೆ ಕೊರಗಜ್ಜನ ಆದಿಕ್ಷೇತ್ರ ಕುತ್ತಾರಿನ ವರೆಗೆ ಪಾದಯಾತ್ರೆ ನಡೆಯಲಿದ್ದು, ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಮತ್ತು ಧಾರ್ಮಿಕ ಸಭೆ ನಡೆಯಲಿದೆ ಎಂದರು.
ಕಳೆದ 2 ವರ್ಷದ ಪಾದಯಾತ್ರೆಯಲ್ಲಿ ಸಾವಿರಾರು ಸ್ವಾಮಿ ಕೊರಗಜ್ಜನ ಭಕ್ತರು ಭಾಗವಹಿಸಿದ್ದು, ಹಿಂದೂ ಸಮಾಜದ ಐಕ್ಯತೆಗೆ, ಲೋಕಕಲ್ಯಾಣಾರ್ಥ ಜೊತೆಗೆ ಬರುವ ಭಕ್ತರ ಸಂಕಷ್ಟ ದೂರವಾಗಿ ಇಷ್ಟಾರ್ಥ ಸಿದ್ಧಿಯಾಗಲೆಂದು ಸಾಮೂಹಿಕ ಸಂಕಲ್ಪ ಪ್ರಾರ್ಥನೆ ನಡೆಯಲಿದೆ. ಕದ್ರಿ ದೇವಸ್ಮಾದಲ್ಲಿ ಬೆಳಿಗ್ಗೆ 6 ಗಂಟೆಗೆ ಸಂಕಲ್ಪ ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಳಲು ಹಾಗು ಪಾದಯಾತ್ರೆಯ ನಂತರ ಬೆಳಿಗ್ಗೆ 9 ಗಂಟೆಗೆ ಕೊರಗಜ್ಜನ ಆದಿಕ್ಷೇತ್ರ ಕುತ್ತಾರಿನಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಮತ್ತು ಧಾರ್ಮಿಕ ಸಭೆ ನಡೆಯಲಿದೆ ಎಂದರು.
ವಿಎಚ್‌ಪಿ ಪ್ರಮುಖರಾದ ಗೋಪಾಲ್ ಕುತ್ತಾರ್, ನವೀನ್ ಮೂಡುಶೆಡ್ಡೆ, ಪ್ರವೀಣ್ ಕುತ್ತಾರ್ ಇದ್ದರು.