ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ಪ್ರತಿಷ್ಠಾ ವರ್ಧಂತಿ

mnbg-4dec-koraga taniya
Published on



ಮಂಗಳೂರು : ನಗರದ ಪದವಿನಂಗಡಿ ಬಳಿಯ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ದ್ವಿತೀಯ ವರ್ಷದ ಪ್ರತಿಷ್ಠಾ ವರ್ಧಂತಿ ಹಾಗೂ ಕೋಲ ಸೇವೆಸಾನಿಧ್ಯದ ಯಜಮಾನ ಭಾಸ್ಕರ ಬಂಗೇರ ಇವರ ನೇತ್ರತ್ವದಲ್ಲಿ ,ತಂತ್ರಿಗಳಾದ ರವಿ ಆನಂದ ಶಾಂತಿ ಆಡುಮರೋಳಿ ಇವರ ಮಾರ್ಗದರ್ಶನದಲ್ಲಿ ಜರಗಿತು. ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂಗಳೂರು ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಯಕ್ಷದ್ರುವ ಫೌಂಡೇಶನ್‌ನ ಸ್ಥಾಪಕಧ್ಯಾಕ್ಷ ಪಟ್ಲ ಸತೀಶ್ ಶೆಟ್ಟಿ, ಅರ್ಚಕ ಪ್ರಾಣೇಶ್, ಕ್ಯಾ.ಬ್ರಿಜೇಶ್ ಚೌಟ, ವಸಂತ ಪೂಜಾರಿ, ನವನೀತ ಶೆಟ್ಟಿ ಕದ್ರಿ, ಕೆ.ಕೆ. ಪೇಜಾವರ, ಪ್ರದೀಪ್ ಆಳ್ವ,
ಲೀಲಾಕ್ಷ ಕರ್ಕೇರಾ, ಎಂ. ಅಶೋಕ್ ಶೇಟ್, ನವೀನ್ ಕುಮಾರ್, ಕ್ಷೇತ್ರದ ಸೇವಾಕರ್ತರುಗಳಾದ ವಿಮಲಾ ಮತ್ತು ವಿಜಯ ಭಾಸ್ಕರ ಬಂಗೇರ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net