

ಉಡುಪಿ: ಜಿಲ್ಲೆಯಲ್ಲಿ 200 ಕೊರಗ ಕುಟುಂಬಗಳಿಗೆ ಹಕ್ಕುಪತ್ರ ದೊರಕಿದೆ. ಇನ್ನೂ ಅಂದಾಜು 2000 ಕುಟುಂಬಗಳು ಬಾಕಿಯಿದ್ದು, ಈ ಕುಟುಂಬಗಳಿಗೆ ಶ್ರೀದಲ್ಲಿ ಭೂಮಿ ಒದಗಿಸಬೇಕು ಎಂದು ಕರ್ನಾಟಕ&ಕೇರಳ ಕೊರಗ ಅಭಿವೃದ್ಧಿ ಸಂಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಆಗ್ರಹಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಜಿಲ್ಲೆಯ ಕೊರಗ ಸಮುದಾಯದ ಕುಟುಂಬಗಳಿಗೆ ಕೃಷಿ ಭೂಮಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಡಾ.ಮಹಮ್ಮದ್ ಫೀರ್ ವರದಿಯಲ್ಲಿ ಸಮುದಾಯದ ಪ್ರತಿಯೊಂದು ಕುಟುಂಬಕ್ಕೂ ತಲಾ 2.5 ಎಕರೆ ಭೂಮಿ ನೀಡಿ ಕೃಷಿಗೆ ಉತ್ತೀಜನ ನೀಡಲು ಶಿಫಾರಸು ಮಾಡಲಾಗಿದೆ. ಕೊಕ್ಕರ್ಣೆಯಲ್ಲಿ ನಡೆದ ಗ್ರಾಮವಾಸ್ತವ್ಯದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಕೊರಗರಿಗೆ 1 ಸಾವಿರ ಎಕರೆ ಕೃಷಿಭೂಮಿ ನೀಡುವುದಾಗಿ ಭರವಸೆ ನೀಡಿದ್ದರೂ ಇದುವರೆಗೂ ಜಾರಿಯಾಗಿಲ್ಲ ಎಂದರು. ಪ್ರಮುಖರಾದ ಬೊಗ್ರ ಕೊರಗ, ಸುಶೀಲಾ ಕೆಂಜೂರು, ಪುತ್ರನ್ ಹೆಬ್ರಿ, ವಿನಯ ಅಡ್ವೆ, ಗಿರಿಜಾ ಜನ್ನಾಡಿ, ದಿವಾಕರ ಕಳತ್ತೂರು ಮತ್ತಿತರರು ಉಪಸ್ಥಿತರಿದ್ದರು.