ಕೊರಗ ಸಮಾಜದ ಸಮಸ್ಯೆಗಳ ಬಗ್ಗೆ ಸಭೆ

udp-31-khadar
Published on

ಉಡುಪಿ: ಕೊರಗ ಸಮುದಾಯ ಕರಾವಳಿಯ ಮುಗ್ಧ ಸಂಸತಿಯ ಪ್ರತಿಬಿಂಬ. ಸಮುದಾಯದ ಜೊತೆ ನಿಲ್ಲಬೇಕಾಗಿರೋದು ಜನಪ್ರತಿನಿಧಿಗಳ ಕರ್ತವ್ಯ. ಆ. 15ರ ನಂತರ ಸಮಾಜದ ಸಮಸ್ಯೆಗಳ ಬಗ್ಗೆ ಬೆಂಗಳೂರಿನಲ್ಲಿ ಕಂದಾಯ ಇಲಾಖೆಯ ಮಂತ್ರಿಗಳು ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಸಮುದಾಯದ ಅಭಿವೃದ್ಧಿ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸ್ಪೀಕರ್​ ಯು.ಟಿ. ಖಾದರ್​ ತಿಳಿಸಿದರು.

ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೊರಗ ಅಭಿವೃದ್ಧಿ ಸಂದ ನೇತೃತ್ವದಲ್ಲಿ 10 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಆಗಮಿಸಿ, ಕೊರಗ ಸಮುದಾಯದ ಅಹವಾಲು ಸ್ವೀಕರಿಸಿದರು.

ಹೊರಗುತ್ತಿಗೆ ಎಲ್ಲಾದರೂ ವಿದ್ಯಾವಂತರಿಗೆ ಕೆಲಸ ಕೊಡಿ ಎಂಬುದು ಸಮುದಾಯದ ಮುಖಂಡರ ಒತ್ತಾಯವಾಗಿದ್ದು, ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ನೇರ ನೇಮಕಾತಿ ಸಾಧ್ಯವಿಲ್ಲ. ಇದಕ್ಕೆ ಕೆಲ ಕಾನೂನಿನ ತಿದ್ದುಪಡಿಗಳು ಆಗಬೇಕು. ಮೀಸಲಾತಿಯಲ್ಲಿ ರೋಸ್ಟರ್​ ಮತ್ತು ಮೆರಿಟ್​ ಬಹಳ ಮುಖ್ಯ. ಆರೋಗ್ಯ ಮಂತ್ರಿಯಾಗಿದ್ದಾಗ ಕೊರಗ ಸಮುದಾಯಕ್ಕೆ ಸಾಕಷ್ಟು ಸಹಾಯ ಮಾಡಿದ್ದೇನೆ ಎಂದು ತಿಳಿಸಿದರು.
ಮುಂದುವರಿದ ಪ್ರತಿಭಟನೆ
ಒಕ್ಕೂಟದ ಅಧ್ಯೆ ಸುಶೀಲ ನಾಡ ಯು.ಟಿ ಖಾದರ್​ ಮುಂದೆ ಸಮಸ್ಯೆ ಹೇಳುತ್ತಾ ಗದ್ಗದಿತರಾದರು. ಪ್ರತಿಭಟನೆ ಹಿಂಪಡೆಯಲು ಯು.ಟಿ ಖಾದರ್​ ಒತ್ತಾಯಿಸಿ, ಸರ್ಕಾರದ ಮಟ್ಟದಲ್ಲಿ ತಾಂತ್ರಿಕ ಸಮಸ್ಯೆಗಳನ್ನು ವಿವರಿಸಿದರು. ಆದರೂ ಖಾದರ್​ ಒತ್ತಾಯಕ್ಕೆ ಮಣಿಯದೆ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net