ಕೊರಗ ಕಾಲೊನಿ ರಸ್ತೆಗೆ ಅಭಿವೃದ್ಧಿ ಭಾಗ್ಯ

hbr
Published on

ನರೇಂದ್ರ ಎಸ್.ಮರಸಣಿಗೆ ಹೆಬ್ರಿ

ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದ ವಾತ್ಕಲ್-ಹಾಲಿಕೋಡ್ಲು ಸಂಪರ್ಕಿಸುವ ಕೊರಗ ಕಾಲೋನಿ ರಸ್ತೆ ತೀರಾ ನಾದರುಸ್ತಿಯಲ್ಲಿತ್ತು. ಮಳೆಗಾಲದಲ್ಲಿ ಕೆಸರುಗದ್ದೆಯಂತಾಗುತ್ತಿದ್ದ ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹಾಗೂ ಪಾದಚಾರಿಗಳು ನರಕಯಾತನೆ ಪಡುತ್ತಿದ್ದರು. ರಸ್ತೆ ದುರಸ್ತಿ ಮಾಡಬೇಕೆಂಬ ಈ ಭಾಗದ ಜನರ ಅನೇಕ ವರ್ಷದ ಬೇಡಿಕೆ ಈಡೇರುವ ಕಾಲ ಈಗ ಸನ್ನಿಹಿತವಾಗಿದೆ.

ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಸರ್ಕಾರದ ಪಿಎಂ ಜನ್‌ಮನ್ ಯೋಜನೆಯಡಿ 2.5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜನ ಜಾತಿಯ ಮಹಾ ನ್ಯಾಯ ಅಭಿಯಾನದಡಿಯಲ್ಲಿ ವಾತ್ಕಲ್ ಕೊರಗ ಕಾಲೋನಿ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿದೆ.

ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದೇ ದೊಡ್ಡ ಸಾಹಸ. ಅನೇಕ ಬಾರಿ ವಾಹನ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆ ತುಂಬಾ ಕೆಸರಿನಿಂದ ಕೂಡಿದ್ದು ಶಾಲೆ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಮುಂದಿನ ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ.

 ಸಾರ್ವಜನಿಕರಿಂದಲೇ ದುರಸ್ತಿ

ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆ ಕೆಸರುಗದ್ದೆಯಂತಾಗುತ್ತದೆ. ಸಂಚಾರಕ್ಕೆ ತೀರಾ ಸಮಸ್ಯೆ ಆಗುತ್ತಿದ್ದರಿಂದ ಗ್ರಾಮ ಪಂಚಾಯಿತಿ, ಶಾಂತಿನಿಕೇತನ ಯುವ ವೃಂದ, ಕಂಬಳ ಕ್ರೀಡಾ ಸಮಿತಿ ಹಾಗೂ ಸಾರ್ವಜನಿಕರೇ ಸೇರಿ ಶ್ರಮದಾನದ ಮೂಲಕ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುತ್ತಿದ್ದರು.

ಗುಣಮಟ್ಟದ ರಸ್ತೆ ನಿರ್ವಾಣಕ್ಕೆ ಒತ್ತಾಯ

ರಸ್ತೆ ಕಾಮಗಾರಿ ವಹಿಸಿಕೊಳ್ಳುವ ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ವಾಣ ವಾಡಬೇಕು, ಯೋಜನೆ ಯಶಸ್ವಿಯಾಗಬೇಕಾದರೆ ಕಾಮಗಾರಿ ಉತ್ತಮವಾಗಿ ನಡೆಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಿರಂತರ ವರದಿ ಪ್ರಕಟ

ವಾತ್ಕಲ್-ಹಾಲಿಕೋಡ್ಲು ಸಂಪರ್ಕಿಸುವ ಕೊರಗ ಕಾಲೋನಿ ರಸ್ತೆಯ ಸಮಸ್ಯೆ ಕುರಿತು ವಿಜಯವಾಣಿ ಪತ್ರಿಕೆ ನಿರಂತರವಾಗಿ ವರದಿ ಪ್ರಕಟಿಸಿತ್ತು. ಇದರ ಲಶ್ರುತಿಯಾಗಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಪರಿಕಲ್ಪನೆಯಡಿ ಕಾರ್ಯನಿರ್ವಹಿಸುತ್ತಿದೆ. ಸವಾಜದ ಎಲ್ಲ ಸ್ತರದ ಜನರು ಮುಖ್ಯವಾಹಿನಿಗೆ ಬರಬೇಕೆಂಬ ಆಶಯ ಹೊಂದಿ, ಇದರ ಭಾಗವಾಗಿ ವಾತ್ಕಲ್ ಕೊರಗ ಕಾಲೋನಿ ರಸ್ತೆ ಅಭಿವೃದ್ಧಿ ಹೊಂದುತ್ತಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶ್ರೀವಾಗಿ ಕಾಮಗಾರಿ ಪ್ರಾರಂಭಿಸಲಾಗುವುದು. - ಸುನ್ೀಕುವಾರ್, ಕಾರ್ಕಳ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net