ಬೈಂದೂರು: ಬೈಂದೂರು ಕೊರಾಡಿ ಶ್ರೀ ವನದುರ್ಗಾಪರಮೇಶ್ವರಿ ದೇವಳದಲ್ಲಿ ಏ.25ರಿಂದ 28ರವರೆಗೆ ಶ್ರೀ ದೇವರ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ, ನವಚಂಡಿಕಾ ಯಾಗ ಹಾಗೂ ಅಖಂಡ ಭಜನೋತ್ಸವ ಜರುಗಲಿದೆ ಎಂದು ದೇವಳದ ಆನುವಂಶಿಕ ಮೊಕ್ತೇಸರ ನಂದಕಿಶೋರ್ ಉಳ್ಳಾಲ ತಿಳಿಸಿದ್ದಾರೆ.
ಏ.24ರಂದು ಬೆಳಗ್ಗೆ ಗುರುವಂದನೆ, ಫಲನ್ಯಾಸ, ಗಣಪತಿ ಪೂಜೆ, ಕೃಚ್ಚಾಚರಣೆ ದೇವನಾಂದಿ, ಮಾತೃಕಾಪೂಜೆ, ಮಹಾಸಂಕಲ್ಪ, ಆಚಾರ್ಯಾದಿ ಋತ್ವಿಗ್ಗರಣ, ಮಧುಪರ್ಕ, ಕೌತುಕ ಬಂಧನ, ಅಷ್ಟಮೂರ್ತಿ ಪ್ರಾರ್ಥನೆ, ಬಿಂಬಶುದ್ಧಿ ಕಲಶ ಸ್ಥಾಪನೆ, ಬಿಂಬಶುದ್ಧಿ ಹೋಮ, ದೇವಬಿಂಬಕ್ಕೆ ಜಲಾಧಿವಾಸಾಂತ ಶುದ್ಧಿ ಕರ್ಮಗಳು, ಅಕೃತ ಹೋಮ. ಸಂಜೆ ಗಣಪತಿ ಮಣ್ಯಾಹದೊಂದಿಗೆ ಯಾಗಶಾಲಾ ಪ್ರವೇಶ, ರಾಕೋಘ್ನ, ವಾಸ್ತು ಹೋಮ, ವಾಸ್ತು ಪೂಜೆ ಹಾಗೂ ವಾಸ್ತುಬಲಿ, ಕುಂಡ ಮಂಟಪ ಸಂಸ್ಕಾರ ಕುಂಭೇಶ ಪೂಜಾ ಬೀಜಾವಾಪ ಹಾಗೂ ಶಯ್ಯಕಲ್ಪನೆ ಮಂಡಲ ಪೂಜಾ ಧ್ಯಾನಾಧಿ ವಾಸಾಂತ ಪೂಜೆ, ಹೋಮ ನಡೆಯಲಿದೆ.
25ರಂದು ಬೆಳಗ್ಗೆ ಗಣಪತಿ ಪೂಜೆ ಪುಣ್ಯಾಹ, ರತ್ನನ್ಯಾಸ ಪೂರ್ವಕ ಪೀಠಪ್ರತಿಷ್ಠಾಪನಾ ನವಗ್ರಹ ಹೋಮ, ಮುಹೂರ್ತ ಗ್ರಹಣ ಸುಮೂರ್ಹತದಲ್ಲಿ ವನದುರ್ಗಾಪರಮೇಶ್ವರಿಯ ಪ್ರತಿಷ್ಠಾಪನಾ ಅಷ್ಟಬಂಧ, ಜೀವಕುಂಭಾಭಿಷೇಕ, ಪ್ರಾಣಪ್ರತಿಷ್ಠಾಪನೆ, ತತ್ವ ಕಲಾಧಿನ್ಯಾಸಗಳು, ಕೇತುಹೋಮ, ನಿರೀಕ್ಷಾ ಪೂಜೆ, ಧ್ವಜಾರೋಹಣ ಬಲಿ ಹಾಗೂ ಹೋಮಗಳು, ಸಂಜೆ ಗಣಪತಿ ಪೂಜೆ, ಪುಣ್ಯಾಹ ವಾಚನ, ದೇವತಾಶ್ವನ, ಭೇರೀತಾಡನ, ಗುಪ್ತಹೋಮ, ರಂಗೋತ್ಸವ ಪೂಜೆ, ಬಲಿ, ರಾಜೋಪಚಾರ ಪೂಜೆ, ಬ್ರಹ್ಮಕಲಶಸ್ಥಾಪನೆ ನಡೆಯಲಿದೆ.
26ರಂದು ಗಣಪತಿ ಪೂಜೆ ಪುಣ್ಯಾಹ, ಅಧಿವಾಸಾದಿ ಹೋಮ, ತತ್ಪಕಲಾಧಿ ಹೋಮ, ಶಾಂತಿ ಪ್ರಾಯಶ್ಚಿತ್ತ ಹೋಮ, ಮಹಾಪೂರ್ಣಾಹುತಿ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಭೂತಬಲಿ, ಧ್ವಜಾವರೋಹಣ, ಅಂಕುರಾರೋಪಣ, ಪ್ರಸನ್ನ ಪೂಜೆ, ತೀರ್ಥ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿದ್ವಾನ್ ಮಂಜುನಾಥ ಭಟ್ಟ ಹರೇಗೋಡು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ ಹೊಸಪಟ್ಟಣ ಯಕ್ಷಗಾನ ಕಲಾ ಟ್ರಸ್ಟ್ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
27ರಂದು ದೀಪಸ್ಥಾಪನೆ, ಅಖಂಡ ಭಜನಾರಂಭ, ನವಚಂಡಿಕಾ ಕಲಶಸ್ಥಾಪನೆ, ಪಾರಾಯಣ ಜಪ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. 28ರಂದು ಭಜನಾ ಮಂಗಲೋತ್ಸವ, ನವಚಂಡಿಕಾ ಹೋಮ ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ನಂದಕಿಶೋರ್ ತಿಳಿಸಿದ್ದಾರೆ.