ಸ್ವಚ್ಛತಾ ಹೀ ಸೇವಾ ಜನಾಂದೋಲನ ಸೆ.14ರಿಂದ

koppalzp ceo Rahul ratnam pandey gandhi jayanti program
Published on

ಕೊಪ್ಪಳ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತಾ ಹಿ ಸೇವಾ ವಿಶೇಷ ಜನಾಂದೋಲನ ಸೆ.14ರಿಂದ ಅಕ್ಟೋಬರ್​ 2ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ತಿಳಿಸಿದ್ದಾರೆ.

ಮಹಾತ್ಮ ಗಾಂಧೀಜಿ ಜನ್ಮ ದಿನ ಅಂಗವಾಗಿ ಸ್ವಚ್ಛ ಭಾರತ ದಿನವಾಗಿ ಆಚರಿಸಲಾಗುತ್ತಿದೆ. ಗಾಂಧೀಜಿ ಧ್ಯೇಯವಾಕ್ಯ ಸ್ವಚ್ಛತೆಯೇ ದೈವತ್ವ ಎಂಬ ಕನಸನ್ನು ನನಸಾಗಿಸಲು ಸೆ.14 ಅಕ್ಟೋಬರ್​ 2ವರೆಗೆ ವಿಶೇಷ ಜನಾಂದೋಲನ ಆಯೋಜಿಸಲಾಗಿದೆ. ಸಭಾ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ ಎಂಬುದು ಈಬಾರಿ ಘೋಷ ವಾಕ್ಯ. ಎಲ್ಲೆಡೆ ಸ್ವಚ್ಛತೆ ಕಾಪಾಡಿಕೊಂಡು ಸುಂದರ ಗ್ರಾಮಗಳನ್ನು ರೂಪಿಸುವ ಮಹಾತ್ವಾಕಾಂೆ ಹೊಂದಲಾಗಿದೆ. ಸ್ವಯಂಪ್ರೇರಿತ ಶ್ರಮದಾನ ಚಟುವಟಿಕೆ, ಹೆಚ್ಚು ಜನಜಂಗುಳಿ ಇರುವ ಬಸ್​, ರೈಲು ನಿಲ್ದಾಣ, ಕೆರೆ, ಹಳ್ಳ, ನದಿ ತೀರ, ಸಮುದಾಯ ಭವನ, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು, ಚರಂಡಿ, ನಾಲಾ ಸ್ವಚ್ಛತೆ ಹಮ್ಮಿಕೊಳ್ಳೋಣ.

ಏಕ ಬಳಕೆ ಪ್ಲಾಸ್ಟಿಕ್​ ನಿಷೇಧ ಹಾಗೂ ಇತರ ವಿಷಯಗಳ ಕುರಿತು ಜಾಗೃತಿ ಕೈಗೊಳ್ಳಲಾಗುವುದು. ಜಿಲ್ಲೆಯ ಎಲ್ಲ ಗ್ರಾಪಂಗಳು, ಎನ್​ಜಿಒಗಳು, ನೆಹರು ಯುವ ಕೇಂದ್ರ, ಶಾಲಾ&ಕಾಲೇಜು ಹಾಗೂ ಸಾರ್ವಜನಿಕರು ತಮ್ಮ ಹಂತದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಸದೃಢ ಭಾರತ ನಿರ್ಮಾಣಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net