ಗೊಬ್ಬರದ ಅಂಗಡಿಯಲ್ಲೇ ವಿಷ ಸೇವಿಸಿ ರೈತ ಸಾವು

IMG-20220730-WA0009.jpg
Published on

ಕೊಪ್ಪಳ: ರಸಗೊಬ್ಬರ ಅಂಗಡಿಯಲ್ಲಿಯೇ ವಿಷ ಸೇವಿಸಿ ರೈತನೋರ್ವ ಮೃತಪಟ್ಟಿದ್ದಾನೆ.


ಕೊಪ್ಪಳ ತಾಲೂಕಿನ ಹನುಕುಂಟಿ ಗ್ರಾಮದ ರವಿ ಲಕ್ಕುಂಡಿ (38) ಮೃತ ರೈತ‌. ಕೊಪ್ಪಳ್ದ ದಲ್ಲಾಳಿ ಅಂಗಡಿಯೊಂದರಲ್ಲಿ ಸಾಲ ಮಾಡಿಕೊಂಡಿದ್ದ. ಮೆಕ್ಕೆ ಜೋಳ ಬೆಳೆ ಬೆಳೆದಿದ್ದು, ಅದನ್ನು ಪಟ್ಟಿ ಮಾಡಿಸಿದ್ದ.‌ಆದರೂ ಸಾಲ ತೀರಿಲ್ಲ ಎನ್ನಲಾಗಿದೆ. ಜತೆಗೆ, ಅಂಗಡಿಯವರು ಮಾಡಿದ ಬಾಕಿ ಮೊತ್ತದಲ್ಲಿ ವ್ಯತ್ಯಾಸವಾದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾನೆನ್ನಲಾಗಿದೆ.

ಮತ್ತೆ ಸಾಲ ಕೊಡದ ಕಾರಣ ಅಂಗಡಿಯಲ್ಲಿ ಇದ್ದ ಕ್ರಿಮಿನಾಶಕ ಸೇವಿಸಿದ್ದಾನೆ. ಬಳಿಕ ಅಂಗಡಿಯವರೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಇನ್ನು ಪ್ರಕರಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net