ಕೊಪ್ಪಳ ಜಿಪಂ ಸಿಇಒ ಫೌಜಿಯಾ ತರನ್ನುಮ್ ವರ್ಗಾವಣೆ

Fouziya Taranum, Rahul Rathnam Pande New CEO Koppal
Published on

ಕೊಪ್ಪಳ: ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್ ವರ್ಗಾವಣೆಗೊಂಡಿದ್ದು, ನೂತನ ಸಿಇಒ ಆಗಿ ರಾಹುಲ್ ರತ್ಮಂ ಪಾಂಡೆ ಅವರನ್ನು ನೇಮಿಸಿ ಸರ್ಕಾರ ಸೋಮವಾರ ಆದೇಶಿಸಿದೆ. ತರುನ್ನಮ್ ಕಳೆದ ಒಂದುವರೆ ವರ್ಷದ ಹಿಂದೆ ಜಿಪಂ ಸಿಇಒ ಆಗಿ ಕೊಪ್ಪಳಕ್ಕೆ ಆಗಮಿಸಿದ್ದರು. ಸದ್ಯ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಣಾಧಿಕಾರಿಯಾಗಿ ವರ್ಗವಾಗಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ, ಭೂಸ್ವಾಧಿನ ವಿಭಾಗದ ಪ್ರದಾನ ವ್ಯವಸ್ಥಾಪಕರಾಗಿದ್ದ ರಾಹುಲ್ ರತ್ನಂ ಪಾಂಡೆ ಕೊಪ್ಪಳ ನೂತನ ಸಿಇಒ ಆಗಿ ನೇಮಕವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net