ಶ್ರೀಕೃಷ್ಣ್ಣನ ಸಂದೇಶ ಸರ್ವಕಾಲಕ್ಕೂ ಅನ್ವಯ; ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್ ಅಭಿಪ್ರಾಯ

23082022 ylb
Published on


ಯಲಬುರ್ಗಾ: ಗ್ರಾಮೀಣ ಪ್ರದೇಶದಲ್ಲಿ ಯಾದವ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮುಖಾಂತರ ಮುಖ್ಯವಾಹಿನಿಗೆ ತರಬೇಕು ಎಂದು ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್ ಹೇಳಿದರು.

ತಾಲೂಕಿನ ಹುಲೇಗುಡ್ಡ ಗ್ರಾಮದಲ್ಲಿ ತಾಲೂಕಾಡಳಿತ ಹಾಗೂ ಯಾದವ ಸಮುದಾಯದಿಂದ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಕೃಷ್ಣನ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಗವದ್ಗೀತೆ ಮೂಲಕ ಶ್ರೀಕೃಷ್ಣ್ಣ ಸಾರಿರುವ ಸಂದೇಶಗಳು ಸರ್ವಕಾಲಕ್ಕೂ ಅನ್ವಯವಾಗಲಿವೆ. ಯುವ ಜನಾಂಗ ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರ ಸರಿದು, ಶಿಕ್ಷಣದತ್ತ ಚಿತ್ತಹರಿಸಬೇಕು ಎಂದರು.

ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಅಟಮಾಳಗಿ ಮಾತನಾಡಿ, ಜಗತ್ತಿನ ಅನೇಕ ಮಹಾನ್ ವ್ಯಕ್ತಿಗಳ ಉನ್ನತ ಸಾಧನೆಗೆ ಭಗವದ್ಗೀತೆಯಲ್ಲಿನ ಸಂದೇಶಗಳು ಕಾರಣವಾಗಿವೆ. ಧರ್ಮದ ರಕ್ಷಣೆಗಾಗಿ ಅಧರ್ಮದ ವಿರುದ್ಧ ಹೋರಾಡಲು ಅವತರಿಸಿದ ಶ್ರೀಕೃಷ್ಣ್ಣನ ಆದರ್ಶ ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಬಾಳಪ್ಪ ಬಂಡ್ಲಿ ಮಾತನಾಡಿದರು. ಪ್ರಮುಖರಾದ ಸೀನಪ್ಪ ಪೂಜಾರ, ದುರಗನಗೌಡ ಸಾಲಬಾವಿ, ಲಿಂಗರಾಜ ಹೊಸಮನಿ, ಮುದಿಯಪ್ಪ ಕರೆಕುರಿ, ಹನುಮಪ್ಪ ಮ್ಯಾಗೇರಿ, ಮುದಕಪ್ಪ ಕಂತಿ, ವಂಕಟೇಶ ಗೊಲ್ಲರ, ಭೀಮಪ್ಪ, ದುರಗನಗೌಡ ಪಾಟೀಲ, ಕುದರೆಲ್ಲಪ್ಪ, ಯಂಕಪ್ಪ, ಹುಲ್ಲಪ್ಪ ಹರಿಜನ, ಯಮನೂರಪ್ಪ ಕಾಗಿ, ಸಂಗಪ್ಪ ಪೂಜಾರ, ಯಂಕಪ್ಪ, ಹನುಮಪ್ಪ ಕಂಬಳಿ, ಶರಣಪ್ಪ ತಲ್ಲೂರು, ಮುತ್ತಪ್ಪ, ಯಂಕಪ್ಪ, ಹನುಮಪ್ಪ, ಅಜ್ಜಪ್ಪ ಬಂಡ್ಲಿ ಸೇರಿದಂತೆ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net