

ಕೊಪ್ಪಳ: ಕೊಪ್ಪಳ ಪ್ರಾಚೀನ ಕಾಲದಲ್ಲಿ ಪ್ರಮುಖ ತಾಣವಾಗಿದ್ದು ವಾಣಿಜ್ಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತು. ಇಲ್ಲಿ ಅನೇಕ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವೆಂದು ವಿಎಸ್‌ಕೆ ವಿವಿ ಸಿಂಡಿಕೇಟ್ ಸದಸ್ಯ ಡಾ.ಬಸವರಾಜ ಪೂಜಾರ ಹೇಳಿದರು.
ನಗರದ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್ ಅವರ ‘ಕೊಪ್ಪಳ ಸ್ಥಳನಾಮ : ಒಂದು ವಿಶ್ಲೇಷಣೆ’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಆಯಾ ಕಾಲಮಾನಕ್ಕೆ ತಕ್ಕಂತೆ ಕೊಪ್ಪಳದ ಸ್ಥಳನಾಮ ಬದಲಾಗಿದೆ. ಅಂದಿನ ಕಾಲದ ಚರಿತ್ರೆ, ಸಂಸ್ಕೃತಿ ಮತ್ತು ಆಡಳಿತ ವ್ಯವಸ್ಥೆಯನ್ನು ತಿಳಿಸುತ್ತ ಬಂದಿರುವುದು ಈ ಗ್ರಾಮದ ವಿಶೇಷತೆ ಎಂದರು.
ಭದ್ರತಾ ಕಾವಲುಗಾರರಾದ ಗವಿಸಿದ್ದಪ್ಪ ಕಡೆಮನಿ ಕೃತಿ ಬಿಡುಗಡೆಗೊಳಿಸಿ, ಕೃತಿ ಬಿಡುಗಡೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದರು. ಡಾ.ರಾಜು ಹೊಸಮನಿ ಮಾತನಾಡಿ, ಕುಪಣದಿಂದ ಕೊಪ್ಪಳದವರಗೆ ಹೇಗೆ ಬದಲಾಗುತ್ತ ಬಂದಿದೆ ಎಂಬುದನ್ನು ಈ ಕೃತಿ ವಿವರಿಸುತ್ತದೆ ಎಂದರು. ಪ್ರಾಚಾರ್ಯರಾದ ಡಾ.ಚನ್ನಬಸವ, ಡಾ.ವೀರೇಶಕುಮಾರ ಎನ್.ಎಸ್., ಪ್ರಾಧ್ಯಾಪಕರಾದ ಡಾ.ದಯಾನಂದ ಸಾಳುಂಕೆ, ಪ್ರೊ.ಶರಣಬಸಪ್ಪ ಬಿಳೆಎಲಿ, ಡಾ.ಬಾಳಪ್ಪ ತಳವಾರ. ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್ ಇತರರಿದ್ದರು.