ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಮಸೀದಿ ಹೋಲುವ ಕಟ್ಟೆ ತೆರವಿಗೆ ಸಂಸದ ಪತ್ರ

19 Kpl Ravi 1a
Published on

ಕೊಪ್ಪಳ: ನಗರದ ರೈಲ್ವೆ ನಿಲ್ದಾಣದಲ್ಲಿ ಮಸೀದಿ ಹೋಲುವ ಕಟ್ಟೆಯನ್ನು ಅನಧಿಕೃತವಾಗಿ ನಿರ್ಮಾಣವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ನಿಲ್ದಾಣವನ್ನು ಇಲಾಖೆ ಇಸ್ಲಾಮೀಕರಣ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ನಿಲ್ದಾಣದ ಮುಖ್ಯ ದ್ವಾರದಿಂದ ಸ್ವಲ್ಪ ದೂರದಲ್ಲೇ ಅಶ್ವತ್ಥ ವೃಕ್ಷಗಳಿದ್ದು, ಸುತ್ತಲೂ ಕಟ್ಟೆ ಕಟ್ಟಿ ಹಸಿರು ಬಣ್ಣ ಬಳಿಯಲಾಗಿದೆ.

ಧ್ವಜ ನೆಟ್ಟು, ಉಪ್ಪು ಹಾಕಿ ಪೂಜೆ ಸಲ್ಲಿಸಲಾಗಿದೆ. ಬಹು ವರ್ಷದಿಂದ ಇಲ್ಲಿ ಕಟ್ಟೆ ನಿರ್ಮಿಸಿದ್ದು, ಇತ್ತೀಚೆಗೆ ಎರಡು ಕೋಮುಗಳ ಜನರ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ. ವಿಡಿಯೋ ವೈರಲ್ ಆಗಿದ್ದರಿಂದ ಇದನ್ನು ತೆರವುಗೊಳಿಸಬೇಕು ಎಂದು ಕೋರಿ ಸಂಸದ ಸಂಗಣ್ಣ ಕರಡಿ ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net