ಕೊಪ್ಪಳ ಸರ್ಕಾರಿ ಪದವಿ ಕಾಲೇಜಿಗೆ ನ್ಯಾಕ್ ಸಮಿತಿ ಭೇಟಿ, ಪರಿಶೀಲನೆ

0203-Kpl-Ravi-1
ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗುರುವಾರ ಭೇಟಿ ನೀಡಿದ ನ್ಯಾಕ್ ಸಮಿತಿ ಸದಸ್ಯರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಸಮಿತಿ ಸದಸ್ಯರಾದ ಪ್ರೊ.ಶಿವಕುಮಾರ ಪಾಂಡೆ, ಪ್ರೊ.ಲಿಮ್‌ಭದ್ರಿ ರಿಕ್ಕಾ, ಡಾ.ತರುಣ್ ಬಂಡೋಪಾಧ್ಯಾಯ, ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಇದ್ದರು.
Published on

ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗುರುವಾರ ಯುಜಿಸಿ ನ್ಯಾಕ್ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಛತ್ತೀಸ್‌ಗಡದ ಪ್ರೊ.ಶಿವಕುಮಾರ ಪಾಂಡೆ, ತೆಲಂಗಾಣದ ಪ್ರೊ.ಲಿಮ್‌ಭದ್ರಿ ರಿಕ್ಕಾ ಹಾಗೂ ಪಶ್ಚಿಮ ಬಂಗಾಳದ ಡಾ.ತರುಣ್ ಬಂಡೋಪಾಧ್ಯಾಯ ನೇತೃತ್ವದ ಸಮಿತಿಯನ್ನು ವಿದ್ಯಾರ್ಥಿಗಳು ಡೊಳ್ಳುಕುಣಿತ, ನಂದಿಕೋಲು, ವೀರಗಾಸೆ, ಹೆಜ್ಜೆಮೇಳ ಹಾಗೂ ವಿವಿಧ ಸಾಂಸ್ಕೃತಿಕ ನೃತ್ಯಗಳೊಂದಿಗೆ ವಿಜೃಂಭಣೆಯಿಂದ ಸ್ವಾಗತ ಕೋರಿದರು. ಪ್ರಾಚಾರ್ಯ ಪ್ರೊ.ತಿಮ್ಮಾರೆಡ್ಡಿ ಮೇಟಿ, ನ್ಯಾಕ್ ಸಂಚಾಲಕ ಡಾ.ಪ್ರಭುರಾಜ ನಾಯಕ, ಸಹ ಸಂಚಾಲಕ ಪ್ರೊ.ಶಿವನಾಥ್ ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು ಸ್ವಾಗತಿಸಿದರು.

ಸಮಿತಿ ಸದಸ್ಯರು ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ಕಾರ್ಯ ವೈಖರಿ ಹಾಗೂ ಗುಣಮಟ್ಟ ಪರಿಶೀಲಿಸಿದರು. ಅಲ್ಲದೇ ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ಪಾಲಕರು, ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಡಾ.ಭಾಗ್ಯಜ್ಯೋತಿ ನೇತೃತ್ವದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ವಿದ್ಯಾರ್ಥಿನಿಯರಾದ ಅನುಷಾ, ರಿಹಾನಾ ಇದ್ದರು.

0203-ಕೆಪಿಎಲ್-ರವಿ-1

ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗುರುವಾರ ಭೇಟಿ ನೀಡಿದ ನ್ಯಾಕ್ ಸಮಿತಿ ಸದಸ್ಯರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಸಮಿತಿ ಸದಸ್ಯರಾದ ಪ್ರೊ.ಶಿವಕುಮಾರ ಪಾಂಡೆ, ಪ್ರೊ.ಲಿಮ್‌ಭದ್ರಿ ರಿಕ್ಕಾ, ಡಾ.ತರುಣ್ ಬಂಡೋಪಾಧ್ಯಾಯ, ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net