ರೈಲು ಸಂಚಾರ ರದ್ದು

new rail new
Published on

ಹುಬ್ಬಳ್ಳಿ : ಕೊಪ್ಪಳ ಯಾರ್ಡ್​ನಲ್ಲಿ ಕೈಗೊಂಡಿರುವ ಸುರಕ್ಷತಾ ಕಾಮಗಾರಿ ಹಿನ್ನೆಲೆಯಲ್ಲಿ ಈ ಮಾರ್ಗದ ವಿವಿಧ ರೈಲುಗಳ ಸಂಚಾರವನ್ನು ಫೆ. 4ರಂದು ರದ್ದುಗೊಳಿಸಲಾಗಿದ್ದು, ಕೆಲ ರೈಲುಗಳು ತಡವಾಗಿ ಸಂಚರಿಸಲಿವೆ.

ಎಸ್​ಎಸ್​ಎಸ್ ಹುಬ್ಬಳ್ಳಿ - ಗುಂತಕಲ್ ಡೈಲಿ ಪ್ಯಾಸೆಂಜರ್ ಹಾಗೂ ಗುಂತಕಲ್- ಎಸ್​ಎಸ್​ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೇಷಲ್ ರೈಲುಗಳ ಸಂಚಾರ ರದ್ದುಗೊಂಡಿದೆ.

ಎಸ್​ಎಸ್​ಎಸ್ ಹುಬ್ಬಳ್ಳಿ - ಕಾರಟಗಿ ಡೈಲಿ ಪ್ಯಾಸೆಂಜರ್ ಸ್ಪೇಷಲ್ ರೈಲು ಹಾಗೂ ಕಾರಟಗಿ- ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೇಷಲ್ ರೈಲು 60 ನಿಮಿಷ ತಡವಾಗಿ ಹೊರಡಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net