ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ: ಕೊಪ್ಪಳದ ಮಹಾಂತೇಶ ಫಾರ್ಮ್ ಪರವಾನಗಿ ರದ್ದು

23072022 koppal azmir alli
Published on

ಕೊಪ್ಪಳ: ಎಂಆರ್‌ಪಿ ದರಕ್ಕಿಂತ ಅಧಿಕ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ ನಗರದ ಜವಾಹರ್ ರಸ್ತೆಯಲ್ಲಿನ ಮಹಾಂತೇಶ ಫಾರ್ಮ್ ಪರವಾನಗಿ ರದ್ದುಪಡಿಸಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಅಜ್ಮೀರ್ ಅಲಿ ಆದೇಶಿಸಿದ್ದಾರೆ.

ಅಂಗಡಿಯಲ್ಲಿ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ದೂರು ಆಧರಿಸಿ ತನಿಖೆ ನಡೆಸಿದಾಗ ಅಧಿಕ ಬೆಲೆ ಪಡೆಯುತ್ತಿರುವುದು ಹಾಗೂ ದರಪಟ್ಟಿ ಪ್ರದರ್ಶಿಸಿಲ್ಲ. ರೈತರಿಗೆ ಬಿಲ್ ನೀಡುತ್ತಿಲ್ಲ. ಪ್ರತಿ ತಿಂಗಳ ದಾಸ್ತಾನು, ಮಾರಾಟ ದಾಖಲೆ ನಿರ್ವಹಿಸದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಗೊಬ್ಬರ ಮಾರಾಟ ಪರವಾನಗಿ ಅಮಾನತುಪಡಿಸಿ ಆದೇಶಿಸಲಾಗಿದೆ. ತಾಲೂಕಿನಲ್ಲಿ ರಸಗೊಬ್ಬರ ಕೊರತೆಯಿಲ್ಲ. ಕೃತಕ ಅಭಾವ ಸೃಷ್ಟಿಸುವ ಬಗ್ಗೆಯೂ ಮಾಹಿತಿ ನೀಡಿದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಡಿ ತಿಳಿಸಿದ್ದಾರೆ.
ಫೋಟೋ: ಅಜ್ಮೀರ್ ಅಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net