

ಕೊಪ್ಪಳ: ಜೆಡಿಎಸ್ ಪಂಚರತ್ನ ಯೋಜನೆಗಳು ಜನರಿಗೆ ಬಹು ಉಪಯೋಗವಾಗಲಿವೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ ಹೇಳಿದರು.
ನಗರದಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ಅಂಗವಾಗಿ ಶನಿವಾರ ಪೀರ್‌ಪಾಷಾ ದರ್ಗಾಕ್ಕೆ ಭೇಟಿ, ಅಂಬೇಡ್ಕರ್, ಬಾಬು ಜಗಜೀವನರಾಂ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಪಂಚರತ್ನ ಯೋಜನೆಯಡಿ ಕೃಷಿ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದೇವೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಾಡಿದ ಜನಪರ ಕೆಲಸಗಳನ್ನು ನಾಡಿನ ಜನತೆ ಮರೆತಿಲ್ಲ. ಮತ್ತೊಮ್ಮೆ ಸಿಎಂ ಆಗಲಿ ಎಂದು ಬಯಸುತ್ತಿದ್ದಾರೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಪಕ್ಕಾ. ಹಿಂದುಳಿದವರು, ಬಡವರು, ಅಲ್ಪಂಸಖ್ಯಾತರು, ದಲಿತರ ಅಭಿವೃದ್ಧಿ ಕಾಳಜಿವಹಿಸುವುದು ಜೆಡಿಎಸ್ ಮಾತ್ರ ಎಂದರು.
ಪೀರ್‌ಪಾಷಾ ಖಾದ್ರಿ ಸಾಬ್ ಮಸೀದಿ ಅಧ್ಯಕ್ಷ ಫಿರೋಜ್ ಮಾನ್ವಿಕರ್ ಹಾಗೂ ಸದಸ್ಯರ ಮನೆ ಸೇರಿ ವಿವಿಧ ಮನೆಗಳಿಗೆ ಭೇಟಿ ನೀಡಿ ಪಂಚರತ್ನ ಯೋಜನೆಗಳನ್ನು ತಿಳಿಸಲಾಯಿತು. ಜೆಡಿಎಸ್ ತಾಲೂಕು ಅಧ್ಯಕ್ಷ ಚನ್ನಪ್ಪ ಮುತ್ತಾಳ, ತಾಲೂಕು ಕಾರ್ಯಾಧ್ಯಕ್ಷ ವೈ. ಅಡ್ಡೇವಾಲೆ, ಪ್ರಮುಖರಾದ ಸುರೇಶಗೌಡ ಪಾಟೀಲ್, ಎಂ.ಡಿ.ಶಫಿ, ಚಂದ್ರಪ್ಪ ದೊಡ್ಮನಿ, ರಂಗಪ್ಪ ಪೂಜಾರಿ, ಮೊಹಿದ್ದೀನ್ ಬೇಪಾರಿ ರಾಜು ನಾಯಕ. ಅಬ್ದುಲ್ ರೆಹಮಾನ್ ಇತರರಿದ್ದರು.