ವಸತಿ ನಿಲಯ ಪಾಲಕರು ಎಚ್ಚರಿಕೆಯಿಂದ ಕೆಲಸ ಮಾಡಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೂಚನೆ

26112022 koppal suresh kokare
Published on

ಕೊಪ್ಪಳ: ವಸತಿ ನಿಲಯಗಳಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುರೇಶ ಕೋಕರೆ ಸೂಚಿಸಿದರು.

ನಗರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಗುರುವಾರ ಇಲಾಖೆ ವ್ಯಾಪ್ತಿಯ ವಸತಿ ಶಾಲೆ-ಕಾಲೇಜುಗಳ ನಿಲಯ ಪಾಲಕರು ಮತ್ತು ಕಾರ್ಮಿಕ ಸಂಘದ ಅಧ್ಯಕ್ಷರ ಸಭೆ ನಡೆಸಿ ಮಾತನಾಡಿದರು.

ವಸತಿ ನಿಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪೂರೈಕೆಯಾಗುವ ಆಹಾರ ಗುಣಮಟ್ಟ ಪರಿಶೀಲಿಸಬೇಕು. ಕೆಲ ನಿಲಯಗಳಲ್ಲಿ ಕಳಪೆ ಆಹಾರದಿಂದ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಈಡಾಗುವಂತಾಗಿದೆ. ಹೀಗಾಗಿ ಎಚ್ಚರಿಕೆಯಿಂದಿರಬೇಕು. ಅಡುಗೆಯವರು, ಸಹಾಯಕರು, ಮೇಲ್ವಿಚಾರಕರು, ಸ್ವಚ್ಛತಾ ಸಿಬ್ಬಂದಿ ಶುಚಿತ್ವ ಕಾಪಾಡಬೇಕು. ಆಹಾರ ತಯಾರಿಸುವಾಗ ಬಹಳ ಎಚ್ಚರ ವಹಿಸಬೇಕು. ಇಲಾಖೆ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಾಕೀತು ಮಾಡಿದರು. ವಿವಿಧ ವಸತಿ ಶಾಲೆ, ಪಿಯು ಕಾಲೇಜು ವಸತಿ ನಿಲಯಗಳ ನಿಲಯಪಾಲಕರು ಮತ್ತು ಕಾರ್ಮಿಕರ ಸಂಘದ ಅಧ್ಯಕ್ಷರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net