ಸಮುದಾಯ ಅಭಿವೃದ್ಧಿ ಪ್ರತಿಷ್ಠಾನದ ಉದ್ದೇಶ

16022020 Koppal Yuva Siri
Published on

ಕೆಪಿಎಸ್ಸಿ ಸದಸ್ಯ ಡಾ.ಲಕ್ಷ್ಮೀನರಸಯ್ಯ ಅಭಿಮತ | ಯುವ ಸಿರಿ ಮತ್ತು ಜೆ.ಪಿ. ಸಾಕ್ಷರತಾ ಅಭಿಯಾನ ಕಾರ್ಯಕ್ರಮ

ಕೊಪ್ಪಳ: ಈಡಿಗ ಸಮುದಾಯದ ಅಭಿವೃದ್ಧಿಗಾಗಿ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನ ಆರಂಭವಾಗಿದ್ದು, ಯಶಸ್ವಿಯಾಗಿ ನಡೆಯುತ್ತಿದೆ ಎಂದು ಕೆಪಿಎಸ್ಸಿ ಸದಸ್ಯ ಲಕ್ಷ್ಮೀನರಸಯ್ಯ ಹೇಳಿದರು.

ನಗರದ ಮಹಾವೀರ ಭವನದಲ್ಲಿ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ಭಾನುವಾರ ಆಯೋಜಿಸಿದ್ದ ಯುವ ಸಿರಿ ಮತ್ತು ಜೆ.ಪಿ. ಸಾಕ್ಷರತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲವಾಗಿ ಎಂಬುದು ಬ್ರಹ್ಮಶ್ರೀ ನಾರಾಯಗುರು ಉವಾಚ. ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಸಮುದಾಯ ಅಭಿವೃದ್ಧಿಗೆ ಪ್ರತಿಷ್ಠಾನ ಶ್ರಮಿಸುತ್ತಿದೆ. ಡಾ.ರಾಜ್‌ಕುಮಾರ್, ಮಾಜಿ ಸಿಎಂ ಎಸ್.ಬಂಗಾರಪ್ಪ ಸಮುದಾಯಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅವರ ನಂತರ ಆರ್.ಎಲ್.ಜಾಲಪ್ಪ, ಜೆಪಿಯವರು ಪರಿವರ್ತನೆ ಮುಂದಾಗಿದ್ದಾರೆ ಎಂದರು.

ಮಾಜಿ ಸಂಸದ ಎಚ್.ಜಿ.ರಾಮುಲು ಮಾತನಾಡಿ, ಜೆಪಿ ಶ್ರೀಮಂತ ವ್ಯಕ್ತಿಯಾಗಿರಬಹುದು. ಆದರೆ, ಅವರಲ್ಲಿನ ಸಹೃದಯ ಬಡವರ ಸಮಸ್ಯೆಗೆ ಮಿಡಿಯುತ್ತಿತ್ತು. ಮಾನವೀಯ ನೆಲೆಯಲ್ಲೂ ಅವರು ಸಿರಿವಂತರಾಗಿದ್ದರು. ಸಮುದಾಯ ಅಭಿವೃದ್ಧಿಗೆ ಅವರ ಕೊಡುಗೆ ಅನನ್ಯ ಎಂದರು. ಮಾಜಿ ಎಂಎಲ್‌ಸಿ ಎಚ್.ಆರ್.ಶ್ರೀನಾಥ, ಆರ್.ಎಲ್.ಜಾಲಪ್ಪ ಅಕಾಡೆಮಿ ಅಧ್ಯಕ್ಷ ಎಚ್.ಎಲ್.ಶಿವಾನಂದ, ಜಿಲ್ಲಾ ಸಂಚಾಲಕ ರಾಘವೇಂದ್ರ ಹುಯಿಲಗೋಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಯಾದಗಿರಿ ಸಿಪಿಐ ಗುರುರಾಜ ಕಟ್ಟಿಮನಿ, ಗಂಗಾವತಿ ನಗರಸಭೆ ಪೌರಾಯುಕ್ತ ಶೇಖರಪ್ಪ ಈಳಿಗೇರ, ಪ್ರಗತಿಪರ ರೈತ ವೆಂಕಟೇಶ ಗಂಗಾವತಿ, ಎಂಎ ರ‌್ಯಾಂಕ್ ವಿದ್ಯಾರ್ಥಿನಿ ಶಂಕ್ರಮ್ಮಗೆ ಸನ್ಮಾನಿಸಲಾಯಿತು.

ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನ ಅಧ್ಯಕ್ಷ ಜೆ.ಪಿ.ಸುಧಾಕರ, ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಎ.ಈ.ಸೂರಿಬಾಬು, ಗೌರವಾಧ್ಯಕ್ಷ ಪ್ರದೀಪ್ ಹಾನಗಲ್, ತಾಲೂಕು ಅಧ್ಯಕ್ಷರಾದ ಈ.ಈರಣ್ಣ, ಈ. ನಾಗರಾಜ, ಸುಖಮುನಿ ದೋಟಿಹಾಳ, ರವಿಂದ್ರ ಕುದರಿಮೋತಿ, ಕಾಶಿ ವಿಶ್ವನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net