ಗ್ರಾಮ ಲೆಕ್ಕಾಧಿಕಾರಿ ಕರಿಯಪ್ಪ ಹುಬ್ಬಳ್ಳಿ ಎಸಿಬಿ ಅಧಿಕಾರಿಗಳ ಬಲೆಗೆ

200722 Kariyappa Hubballi ACB Balege
ಕರಿಯಪ್ಪ ಹುಬ್ಬಳ್ಳಿ
Published on

ಕೊಪ್ಪಳ: ಪಹಣಿ ತಿದ್ದುಪಡಿ ಮಾಡಿ ಕೊಡಲು ಲಂಚ ಪಡೆಯುವ ವೇಳೆ ಕವಲೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಕರಿಯಪ್ಪ ಹುಬ್ಬಳ್ಳಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

ಕೊಪ್ಪಳ ತಾಲೂಕಿನ ಕವಲೂರು ಗ್ರಾಮದ ಶಿವಪ್ಪ ಬೇವೂರು ಎಂಬುವವರು ತಮ್ಮ ತಂದೆಯ ಹೆಸರಿನಲ್ಲಿರುವ ಜಮೀನಿನ ಪಹಣಿ ತಿದ್ದುಪಡಿ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ತಿದ್ದುಪಡಿಗೆ 5 ಸಾವಿರ ರೂ. ಲಂಚ ನೀಡುವಂತೆ ಗ್ರಾಮ ಲೆಕ್ಕಾಧಿಕಾರಿ ಬೇಡಿಕೆ ಇಟ್ಟಿದ್ದ. ಒಂದು ಸಾವಿರ ರೂ. ಮುಂಗಡ ಪಡೆದುಕೊಂಡಿದ್ದಾನೆ. ಇದರಿಂದ ಬೇಸತ್ತ ಶಿವಪ್ಪ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಕೊಪ್ಪಳದ ಟ್ರಿನಿಟಿ ಶಾಲೆ ಹತ್ತಿರದ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಬುಧವಾರ ಬಾಕಿ ಹಣ ಪಡೆವ ವೇಳೆ ದಾಳಿ ನಡೆಸಿ ಅಧಿಕಾರಿಯನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಕೊಪ್ಪಳ ಡಿಎಸ್ಪಿ ಶಿವಕುಮಾರ್ ಎಂ.ಸಿ. ನೇತೃತ್ವದಲ್ಲಿ ಪಿಐಗಳಾದ ಶಿವರಾಜ್ ಇಂಗಳೆ ಸಿಬ್ಬಂದಿ ಸಿದ್ದಯ್ಯ, ರಂಗನಾಥ, ಗಣೇಶ್, ಜಗದೀಶ್, ಉಮೇಶ್, ಸವಿತಾ ತಂಡ ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net