ಎಲ್ಲ ಭಾಷೆಗಳಿಗೂ ಆದ್ಯತೆ ಇರಲಿ

14092022 Koppal Karave protest
Published on

ಕೊಪ್ಪಳ: ಹಿಂದಿ ದಿವಸ್ ಆಚರಣೆ ಖಂಡಿಸಿ ಕರವೇ ನಾರಾಯಣಗೌಡ ಬಣದ ಜಿಲ್ಲಾ ಪದಾಧಿಕಾರಿಗಳು ಬುಧವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಪ್ರತಿ ವರ್ಷ ಸೆ.14ರಂದು ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಿಸುತ್ತಿದೆ. ಈ ಮೂಲಕ ದೇಶದ ಇತರ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ. ಹಿಂದಿ ಭಾಷೆ ಒಂದನ್ನೇ ಮೆರೆಸಲಾಗುತ್ತಿದೆ. ಸಂವಿಧಾನದ ಭಾಗ 17ರಲ್ಲಿ ಭಾಷಾ ನೀತಿಯ ಬಗ್ಗೆ ಉಲ್ಲೇಖವಿದೆ. ಆದರೆ ಕೇಂದ್ರ ಸರ್ಕಾರ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಕೇವಲ ಇಂಗ್ಲಿಷ್ ಮತ್ತು ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಮಾಡಿಕೊಂಡಿರುವುದು ಖಂಡನೀಯ. ಇದರಿಂದ ದೇಶದ ಇತರ ಭಾಷೆಗಳಿಗೆ ಅನ್ಯಾಯವಾಗಲಿದೆ. ಕಲಿಕೆ, ಉದ್ಯೋಗ, ನೇಮಕಾತಿ, ಸಾರ್ವಜನಿಕ ಸೇವೆಗಳಲ್ಲಿ ಅನನುಕೂಲವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಹಿಂದಿ ದಿವಸ ಆಚರಣೆ ರದ್ದುಪಡಿಸಿ, ಹಿಂದಿ ಹೇರಿಕೆ ನಿಲ್ಲಿಸಬೇಕು. ಭಾಷಾ ಅಸಮಾನತೆ ತಡೆಗಟ್ಟಬೇಕು. ಎಲ್ಲ ಭಾಷೆಗಳಿಗೂ ಗೌರವ ನೀಡಬೇಕು. ಸಂವಿಧಾನದಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡಬೇಕು ಎಂದು ಅಗ್ರಹಿಸಿದರು. ಕರವೇ ಜಿಲ್ಲಾಧ್ಯಕ್ಷ ಗಿರೀಶಾನಂದ, ಯುವ ಘಟಕ ಜಿಲ್ಲಾಧ್ಯಕ್ಷ ಹನುಮಂತ ಬೆಸ್ತರ, ಪದಾಧಿಕಾರಿಗಳಾದ ಅನಿಲ್ ಕುಮಾರ್ ಬಿಜ್ಜಳ, ನಿಂಗಪ್ಪ ಮೂಗಿನ, ಸಾವಿತ್ರಿ ದಳವಾಯಿ, ಆನಂದ ಬಂಡಿ, ನೀಲನಗೌಡ ಪಾಟೀಲ, ವಿರೂಪಾಕ್ಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net