

ತಾವರಗೇರಾ: ಕೊಪ್ಪಳದ ನಗರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ತಾವರಗೇರಾ ಗವಿಶ್ರೀ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟುಗಳು ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ಲಬ್‌ನ ಮಂಜುನಾಥ್ ಉದ್ದ ಜಿಗಿತದಲ್ಲಿ (ಪ್ರಥಮ), 200 ಮೀಟರ್ ಓಟದಲ್ಲಿ ಐಶ್ವರ್ಯ ರಮೇಶ ( ದ್ವಿತೀಯ ಸ್ಥಾನ ), 400 ಮೀಟರ್ ಮತ್ತು 100 ಮೀಟರ್ ರಿಲೇ ಅಲ್ತಾಪ್, ಕಿರಣಕುಮಾರ, ಶಿವುಕುಮಾರ, ಮಂಜುನಾಥ (ದ್ವಿತೀಯ ಸ್ಥಾನ) ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ಲಬ್ ನ ಗೌರವಾಧ್ಯಕ್ಷ ವೀರನಗೌಡ ಪಾಟೀಲ್, ಅಧ್ಯಕ್ಷ ಸಾಗರ ಭೇರಿ, ಉಪಾಧ್ಯಕ್ಷ ಸಂಜೀವ ಚಲುವಾದಿ, ತರಬೇತಿದಾರ ಖಾಜಾ ಮೈನುದ್ದೀನ್ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಕ್ಕಳ ಅಭಿವೃದ್ಧಿಯೇ ಶಿಕ್ಷಣ ಇಲಾಖೆಯ ಉದ್ದೇಶ