

ಕೋವಿಡ್ ಕಾರಣ ಎರಡ್ಮೂರು ವರ್ಷಗಳಿಂದ ಸಾಹಿತ್ಯ ಸಮ್ಮೇಳನಗಳು ನಡೆದಿರಲಿಲ್ಲ. ಇದೀಗ ಜಿಲ್ಲಾದ್ಯಂತ ಮೇಲಿಂದ ಮೇಲೆ ಅಕ್ಷರ ಜಾತ್ರೆಗಳು ಆಯೋಜನೆಗೊಳ್ಳುತ್ತಿವೆ. ಮಾ.5 ಮತ್ತು 6ರಂದು ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಜಿಲ್ಲಾ ಮಟ್ಟದ 12ನೇ ನುಡಿಜಾತ್ರೆ ನಡೆಯಲಿದೆ. ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರದವರಾದ, ವಿಜ್ಞಾನ-ತಂತ್ರಜ್ಞಾನ ರಂಗದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಗಳಿಸಿರುವ ಡಾ.ಉದಯಶಂಕರ ಪುರಾಣಿಕ ಸಮ್ಮೇಳನದ ಸರ್ವಾಧ್ಯಕ್ಷತೆವಹಿಸಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಪುರಾಣಿಕರು ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರೂ ಜಿಲ್ಲೆಯೊಂದಿಗಿನ ನಂಟು ಕಳೆದುಕೊಂಡಿಲ್ಲ. ಸೃಜನೇತರ ಸಾಹಿತ್ಯ, ಭಾಷಾಂತರ, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ತಂತ್ರಜ್ಞಾನದಲ್ಲಿ ಕನ್ನಡ ಅಳವಡಿಕೆಯಲ್ಲಿ ಸಾಕಷ್ಟು ಸಾಹಿತ್ಯಿಕ ಕೃಷಿ ಮಾಡಿದ್ದಾರೆ. ಕನ್ನಡದಲ್ಲಿ ಇನ್ನು ಏನೇನು ಕೆಲಸಗಳಾಬೇಕು ? ಅದಕ್ಕಾಗಿ ಕಸಾಪ, ಸರ್ಕಾರ ಏನು ಮಾಡಬೇಕೆಂಬ ಕುರಿತು ವಿಜಯವಾಣಿ ಜಿಲ್ಲಾ ವರದಿಗಾರ ವಿ.ಕೆ.ರವೀಂದ್ರ ನಡೆಸಿದ ಸಂದರ್ಶನದಲ್ಲಿ ಪುರಾಣಿಕರು ಹಂಚಿಕೊಂಡ ಮನದಾಳದ ಮಾತುಗಳು ಇಲ್ಲಿವೆ.
ಪ್ರ: ಕನ್ನಡ ಅನ್ನದ ಭಾಷೆ ಆಗಿದೆಯಾ ?
ಪ್ರ: ಕಸಾಪ ರಾಜಕೀಯ ಪಡಸಾಲೆಯಾಗಿ ಮಾರ್ಪಡುತ್ತಿದ್ದು, ಕನ್ನಡ ಕೆಲಸ ನಿರೀಕ್ಷಿಸಬಹುದೆ ?
ಪ್ರ: ಜಿಲ್ಲೆಯ ಅಭವೃದ್ಧಿಯಲ್ಲಿ ಕಸಾಪ ಪಾತ್ರವೇನು ?
ಪ್ರ: ಕಸಾಪದಲ್ಲಿ ಮೊದಲಿನ ಹೋರಾಟ ಮನೋಭಾವನೆ ಕಡಿಮೆಯಾಗಿದೆಯಾ?
ಪ್ರ: ಜಿಲ್ಲಾ ಸಮ್ಮೇಳನಗಳಲ್ಲಿ ಮಂಡನೆಯಾಗುವ ನಿರ್ಣಯಗಳ ಅನುಷ್ಠಾನವಾಗಿವೆಯಾ ?
ಪ್ರ: ಕನ್ನಡ ಬೆಳವಣಿಗೆಯಲ್ಲಿ ತಂತ್ರಜ್ಞಾನ ಪಾತ್ರವೇನು ?
ಪ್ರ: ವಿಜ್ಞಾನಿಯಾಗಿ ಸಾಹಿತ್ಯಕ್ಕೆ ನಿಮ್ಮ ಕೊಡುಗೆ ಏನಿದೆ ?
ಪ್ರ: ಭಾಷೆ ಬೆಳವಣಿಗೆಗೆ ಏನು ಮಾಡಬೇಕಿದೆ ?
ಉ: ಉತ್ತಮವಾಗಿ ಯೋಚಿಸಬೇಕು. ತಂತ್ರಜ್ಞಾನ ಸಂಬಂಧಿ ವಿಷಯಗಳಲ್ಲಿ ಚೀನಾ ಸೇರಿ ಅನೇಕ ರಾಷ್ಟ್ರಗಳೊಡನೆ ನಾನು ಕೆಲಸ ಮಾಡುತ್ತಿರುವೆ. ಚೀನಾಕ್ಕೆ ತೆರಳಿದಾಗ ಚೀನಿ ಭಾಷೆಗೆ ಅನುವಾದಿಸಿದ ಕೃತಿಗಳನ್ನು ಕೊಂಡೊಯ್ದು ಅಲ್ಲಿನವರಿಗೆ ನೀಡಿದೆ. ಈ ಮೂಲಕ ಕನ್ನಡ ಸಾಹಿತ್ಯವನ್ನು ಬೇರೆ ಭಾಷಿಕರಿಗೆ ತಲುಪಿಸಿದೆ. ಅದರಂತೆ ಎಲ್ಲರೂ ವಿಭಿನ್ನವಾಗಿ ಯೋಚಿಸಿ, ಭಾಷೆ ಬೆಳವಣಿಗೆಗೆ ಕೆಲಸ ಮಾಡಬೇಕು ಅಷ್ಟೆ.