ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಕಚೇರಿ ಆರಂಭಿಸಿದ ಎಂಎಲ್ಸಿ ಹೇಮಲತಾ ನಾಯಕ

121222 Koppala MLC New Office
ಕೊಪ್ಪಳ ಜಿಲ್ಲಾಡಳಿತ ಭವನದ ನೂತನ ಕಚೇರಿಯಲ್ಲಿ ವಿಪ ಸದಸ್ಯೆ ಹೇಮಲತಾ ನಾಯಕ ಸೋಮವಾರ ಕುಟುಂಬ ಸಮೇತ ಪೂಜೆ ಸಲ್ಲಿಸಿದರು.
Published on

ಕೊಪ್ಪಳ: ನಗರದ ಜಿಲ್ಲಾಡಳಿತ ಭವನದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಕಚೇರಿ ಉದ್ಘಾಟನೆ ಕಾರ್ಯಕ್ರಮ ಸೋಮವಾರ ನಡೆಯಿತು. ಕುಟುಂಬ ಸಮೇತ ಸತ್ಯನಾರಾಯಣ ಪೂಜೆ ಸಲ್ಲಿಸುವ ಮೂಲಕ ಕಚೇರಿ ಆರಂಭಿಸಿದರು. ಬಳಿಕ ಮಾತನಾಡಿದ ಹೇಮಲತಾ ನಾಯಕ, ಕೊಪ್ಪಳ ಜಿಲ್ಲೆ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಜಿಲ್ಲೆಯ ಸಚಿವ, ಸಂಸದ, ಶಾಸಕರು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಜನರ ಅಹವಾಲು ಆಲಿಸುವ ದೃಷ್ಟಿಯಿಂದ ಕಚೇರಿ ಆರಂಭಿಸಲಾಗಿದೆ. ಜಿಲ್ಲಾಡಳಿತ ಭವನದ ಕರ್ನಾಟಕ ಒನ್ ಕೇಂದ್ರದಲ್ಲಿ ಕಚೇರಿ ಇದ್ದು, ಸಾರ್ವಜನಿಕರು ಅರ್ಜಿ, ಅಹವಾಲು ಸಲ್ಲಿಸಬಹುದೆಂದು ತಿಳಿಸಿದರು. ಕುಟುಂಬ ಸದಸ್ಯರಾದ ಪರಿಕ್ಷೀತರಾಜ ನಾಯಕ, ಪ್ರೀತೇಶ್ ನಾಯಕ, ಆಪ್ತ ಸಹಾಯಕ ಮಹಾಂತೇಶ ಕೋವಿ, ವಾಣಿಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net