ಕಮಿಷನ್ ದಂಧೆಗೆ ಬ್ರೇಕ್ ಹಾಕದಿದ್ದರೆ ಹೋರಾಟ: ಜಿಲ್ಲಾ ಗುತ್ತಿಗೆದಾರರ ಸಂಘದ ದೇವಪ್ಪ ಅರಕೇರಿ ಎಚ್ಚರಿಕೆ

Devappa Arakera
Published on

ಕೊಪ್ಪಳ: ಜಿಲ್ಲೆ ಸೇರಿ ರಾಜ್ಯಾದ್ಯಂತ ಕಮಿಷನ್ ದಂಧೆ ಜೀವಂತವಿದ್ದು, ಅದನ್ನು ನೀಡದಿದ್ದರೆ ಯಾವುದೇ ಕೆಲಸ ಆಗುವುದಿಲ್ಲ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ದೇವಪ್ಪ ಅರಕೇರಿ ಆರೋಪಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇತ್ತೀಚೆಗೆ ರಾಜ್ಯದಲ್ಲಿ ಕಮಿಷನ್ ದಂಧೆ ಮಿತಿಮೀರಿದ್ದು, ಕಡಿವಾಣ ಹಾಕಬೇಕು. ಜನಪ್ರತಿನಿಧಿಗಳಿಂದ ಗುತ್ತಿಗೆದಾರರು ರೋಸಿ ಹೋಗಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಹೇಳಿರುವುದು ಸತ್ಯವಾಗಿದ್ದು, ಅವರು ವ್ಯವಸ್ಥೆ ವಿರುದ್ಧ ಆರೋಪಿಸಿದ್ದಾರೆ. ಆದರೆ ಇದನ್ನು ತಪ್ಪಾಗಿ ಅರ್ಥೈಸಿದ ಕೆಲ ಜನ ಪ್ರತಿನಿಧಿಗಳು ಕೆಂಪಣ್ಣ ವಿರುದ್ಧ ಹರಿಹಾಯುತ್ತಿದ್ದಾರೆ. ಇದು ಸರಿಯಲ್ಲ. ಕಮಿಷನ್ ದಂಧೆಗೆ ಬ್ರೇಕ್ ಹಾಕಬೇಕು. ಇಲ್ಲದಿದ್ದೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರಾದ ಟಿ.ರತ್ನಾಕರ, ರಾಮಣ್ಣ ಕಲ್ಲಣ್ಣನವರ್, ಡ್ಯಾಮ್ ಪೂಜಾರ, ಕಮಲಸಾಬ್ ಒಂಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net