ಕುಡಿತಕ್ಕೆ ದಾಸರಾಗದೆ ಜೀವನ ನಡೆಸಿ; ಶಿವರಾಮ ಕೃಷ್ಣಾನಂದ ಭಾರತಿ ಸ್ವಾಮೀಜಿ ಕಿವಿಮಾತು ಮಧ್ಯವರ್ಜನ ಶಿಬಿರದ ಸಮಾರೋಪ

14092022 koppal bhagyanagar news
Published on

ಕೊಪ್ಪಳ: ಕುಡಿತದಿಂದ ವಿಮುಖರಾಗಿ ಸುಂದರ ಜೀವನ ನಿಮ್ಮದಾಗಿಸಿಕೊಳ್ಳಬೇಕೆಂದು ಭಾಗ್ಯನಗರದ ಶಂಕರಾಚಾರ್ಯ ಮಠದ ಶಿವರಾಮ ಕೃಷ್ಣಾನಂದ ಭಾರತಿ ಸ್ವಾಮೀಜಿ ಹೇಳಿದರು.

ತಾಲೂಕಿನ ಭಾಗ್ಯನಗರ ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಎಷ್ಟೋ ಜನರು ಕುಡಿತಕ್ಕೆ ದಾಸರಾಗುವ ಮೂಲಕ ಕುಟುಂಬವನ್ನು ಕಷ್ಟದ ಕೂಪಕ್ಕೆ ತಳ್ಳುತ್ತಿದ್ದಾರೆ. ಬಡ, ಮಧ್ಯಮ ವರ್ಗದವರು ಚಟಕ್ಕೆ ಹೆಚ್ಚಾಗಿ ಬಲಿಯಾಗುತ್ತಾರೆ. ನಿತ್ಯ ದುಡಿದ ದುಡ್ಡನ್ನು ಕುಡಿತಕ್ಕೆ ಹಾಳು ಮಾಡಿದರೆ ಕುಟುಂಬ ನಿರ್ವಹಿಸುವುದಾದರೂ ಹೇಗೆ ? ನಾವು ಚಟಕ್ಕೆ ದಾಸರಾಗಬಾರದು. ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಮದ್ಯಪಾನವೊಂದೇ ದಣಿವು ಕಳೆಯುವ ಸುಲಭ ಮಾರ್ಗವಲ್ಲ. ಇದನ್ನು ಎಲ್ಲರೂ ಅರಿಯಬೇಕು. ಕುಡಿತದಿಂದ ವಿಮುಖರಾದವರು ಇನ್ನು ಮುಂದಾದರೂ ಉತ್ತಮ ಜೀವನ ನಡೆಸಿ. ಇತರರಿಗೆ ಮಾದರಿಯಾಗಿ ಬದುಕಿ ಎಂದು ಕಿವಿಮಾತು ಹೇಳಿದರು. ಮುಖಂಡರಾದ ಯಮನೂರಪ್ಪ ಹಾದಿಮನಿ, ಜಗದೀಶ ಕೆ.ಎಚ್. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net