ಭಾನಾಪುರ ಬಳಿ ಅಪಘಾತ: ಗಾಯಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದ ಅಧಿಕಾರಿಗಳು

27072022 koppal officer hospital visit
Published on


ಕೊಪ್ಪಳ: ಭಾನಾಪುರ ಬಳಿ ಅಪಘಾತದಲ್ಲಿ ತೀವ್ರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ ಮಂಗಳವಾರ ವಿಚಾರಿಸಿದರು.

ಅಪಘಾತದಲ್ಲಿ ಗಾಯಗೊಂಡ ಪುಟ್ಟರಾಜ ಹಾಗೂ ಆತನ ತಂಗಿ ಭೂಮಿಕಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪುಟ್ಟರಾಜನ ತಲೆಗೆ ಪೆಟ್ಟು ಬಿದ್ದರೆ, ಭೂಮಿಕಾ ಕೈ-ಕಾಲು ಮುರಿದಿದ್ದು, ಆಗಾಗ ಪಿಟ್ಸ್ ಬರುತ್ತಿದೆ. ಇವರ ಅಣ್ಣ ಬಸವರಾಜ ಸಣ್ಣಪುಟ್ಟ ಗಾಯಗಳಾಗಿದ್ದು, ಚೇತರಿಸಿಕೊಂಡು ಮನೆಯಲ್ಲಿದ್ದಾನೆ. ಆದರೆ, ಅಪಘಾತದಲ್ಲಿ ಮೂವರು ಮಕ್ಕಳು ತಾಯಿ ಪಾರವ್ವಳನ್ನು ಕಳೆದುಕೊಂಡಿದ್ದಾರೆ. ವರ್ಷದ ಹಿಂದೆ ತಂದೆ ತೀರಿಕೊಂಡಿದ್ದರು. ಪಾಲನೆ, ಪೋಷಣೆಗಾಗಿ ಮಕ್ಕಳನ್ನು ಅವಶ್ಯವಿದ್ದಲ್ಲಿ ಕಲ್ಯಾಣ ಸಮಿತಿಗೆ ಹಾಜರುಪಡಿಸುವಂತೆ ಉಪನಿರ್ದೇಶಕಿ ಸಂಬಂಧಿಗಳಿಗೆ ತಿಳಿಸಿದರು. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net