463 ರೂ. ಪಾವತಿಸಿ ಬಸ್ಸಿನಲ್ಲಿ ಪ್ರಯಾಣಿಸಿದ ಕೋಳಿ !

Chicken travel Hydrabad to Gangavati
ಹೈದರಾಬಾದ್‌ನಿಂದ ಗಂಗಾವತಿಗೆ ಆಗಮಿಸಿದ ಕೋಳಿ.
Published on

ಕೊಪ್ಪಳ: ಸಾಮಾನ್ಯವಾಗಿ ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್ ತೆಗೆದುಕೊಳ್ಳುವುದನ್ನು ನಾವೇ ಮರೆತಿರುತ್ತೇವೆ. ಆದರೆ, ಇಲ್ಲೊಂದು ಕೋಳಿ ಹಣ ಪಾವತಿಸಿ ಟಿಕೆಟ್ ಪಡೆದು ಪ್ರಯಾಣಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದೆ….!

ಹೌದು, ಪ್ರಯಾಣಿಕರೊಬ್ಬರು ಸೋಮವಾರ ಹೈದರಾಬಾದ್‌ನಿಂದ ಗಂಗಾವತಿಗೆ ಬರುವಾಗ ತಮ್ಮೊಡನೆ ಕೋಳಿಯೊಂದನ್ನು ತಂದಿದ್ದಾರೆ. ಸಾರಿಗೆ ನಿಯಮ ಪ್ರಕಾರ ಪಕ್ಷಿಗಳನ್ನು ಸಾಗಿಸಲು ಅರ್ಧ ಟಿಕೆಟ್ ಪಡೆದುಕೊಳ್ಳಬೇಕು. ಆದರೆ, ಬಹುಪಾಲು ಜನರು ಬಚ್ಚಿಟ್ಟು ತರುವುದುಂಟು. ಇನ್ನು ಕೆಲವರು ಪಕ್ಷಿಗಳಿಗೆ ಟಿಕೆಟ್ ಯಾಕೆಂದು ತಗಾದೆ ತೆಗೆಯುವುದು ಸಾಮಾನ್ಯ. ಹೀಗಾಗಿ ಟಿಕೆಟ್ ದರಕ್ಕೆ ಗಂಗಾವತಿಯಲ್ಲೇ ಒಂದು ಕೋಳಿ ಕೊಳ್ಳಬಹುದೆಂದು ನಿರ್ವಾಹಕರು ಮಾಲೀಕರಿಗೆ ತಿಳಿಸಿದ್ದಾರೆ. ಆದರೆ, ಕೋಳಿ ಮೇಲಿನ ಪ್ರೀತಿಗೆ ಮಾಲೀಕರು ಟಿಕೆಟ್ ಪಡೆದು ತಮ್ಮೊಡನೆಯೇ ಕೋಳಿ ತರುವುದಲ್ಲದೆ, ಸಾರಿಗೆ ನಿಯಮವನ್ನೂ ಪಾಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net