

ಕೊಪ್ಪಳ: ವಿವಿಧೆಡೆ ಮೊಬೈಲ್ ಕಳೆದುಕೊಂಡು ದೂರು ನೀಡಿದ್ದ ಗ್ರಾಹಕರಿಗೆ ಜಿಲ್ಲಾ ಪೊಲೀಸ್ ಇಲಾಖೆ ಮಂಗಳವಾರ ಕಳೆದುಕೊಂಡ ಮೊಬೈಲ್ ವಾಪಸ್ ನೀಡಿದೆ.
ಒಟ್ಟು ನಾಲ್ಕು ಲಕ್ಷ ರೂ. ಮೌಲ್ಯದ 22 ಮೊಬೈಲ್ ಗಳನ್ನು ಎಸ್ಪಿ ಯಶೋದಾ ವಂಟಗೋಡಿ ವಿತರಿಸಿದರು. ವಿವಿಧ ಮೊಬೈಲ್ ಕಳ್ಳರಿಂದ ವಶಪಡಿಸಿಕೊಂಡ ಮೊಬೈಲ್ ಇವುಗಳಾಗಿದ್ದು, ಸಂಬಂಧಿಸಿದ ವಾತಸುದಾರರಿಗೆ ಕರೆ ಮಾಡಿ ವಿತರಿಸಲಾಯಿತು.
ಮೊಬೈಲ್ ಕಳೆದುಕೊಂಡ ಗ್ರಾಹಕರು ಸಿಇಐಆರ್ ಪೋರ್ಟಲ್ ಮೂಲಕ ದೂರು ದಾಖಲಿಸಬಹುದು. ವಿವರ ಪಡೆವ ಪೊಲೀಸ್ ಇಲಾಖೆ ಮೊಬೈಲ್ ವಿವರ ಆಧರಿಸಿ ತನಿಖೆ ಕೈಗೊಳ್ಳಲಿದೆ ಎಂದು ತಿಳಿಸಿದರು. ಡಿಸಿಆರ್ ಬಿ ಪಿಐ ಸುರೇಶ ಇತರರು ಇದ್ದರು.