ಮದ್ಯ ಅಕ್ರಮ ಮಾರಾಟ ತಡೆಯಿರಿ

ಕೊಪ್ಪಳ ಡಿಸಿ, ಅಬಕಾರಿ ಅಧಿಕಾರಿಗೆ ಗೌರಿಪುರ ಗ್ರಾಮಸ್ಥರ ಮನವಿ
ಕೊಪ್ಪಳದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗೆ ಗೌರಿಪುರ ಗ್ರಾಮಸ್ಥರು ಸೋಮವಾರ ಮನವಿ ಸಲ್ಲಿಸಿದರು. ಪ್ರಮುಖರಾದ ಸಣ್ಣ ಹನುಮಂತ, ಗ್ಯಾನಪ್ಪ ಬಿಳೆಬಾವಿ, ಕೃಷ್ಣ ಭೋವಿ, ಗ್ಯಾನಪ್ಪ ಜೀರಾಳ ಇತರರಿದ್ದರು.
ಕೊಪ್ಪಳದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗೆ ಗೌರಿಪುರ ಗ್ರಾಮಸ್ಥರು ಸೋಮವಾರ ಮನವಿ ಸಲ್ಲಿಸಿದರು. ಪ್ರಮುಖರಾದ ಸಣ್ಣ ಹನುಮಂತ, ಗ್ಯಾನಪ್ಪ ಬಿಳೆಬಾವಿ, ಕೃಷ್ಣ ಭೋವಿ, ಗ್ಯಾನಪ್ಪ ಜೀರಾಳ ಇತರರಿದ್ದರು.
Published on: 

ಕನಕಗಿರಿ: ತಾಲೂಕಿನ ಗೌರಿಪುರದಲ್ಲಿ ಮದ್ಯ ಅಕ್ರಮ ಮಾರಾಟ ನಿಯಂತ್ರಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಕೊಪ್ಪಳದಲ್ಲಿ ಜಿಲ್ಲಾಧಿಕಾರಿ, ಅಬಕಾರಿ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ಗ್ರಾಮದ ಹತ್ತಾರು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ನೆಮ್ಮದಿ ಹಾಳಾಗುತ್ತಿದೆ. ಕಾಲೇಜು, ಪ್ರೌಢ ಶಾಲಾ ಮಕ್ಕಳು ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಯುವಜನತೆ, ಹಿರಿಯರು ಗುಡಿಗಳು, ಶಾಲಾ ಆವರಣ, ಪಂಚಾಯಿತಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕುಡಿದ ಮತ್ತಿನಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಕೌಟುಂಬಿಕ ಕಲಹಗಳೂ ಹೆಚ್ಚಾಗುತ್ತಿವೆ. ಕುಡಿತಕ್ಕೆ ದಾಸರಾದ ತಂದೆಯಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ವೃದ್ಧರು ಬೀದಿಗೆ ಬೀಳುವಂತಾಗಿದೆ. ದಿನಗೂಲಿ ಮಾಡಿ ಬದುಕುತ್ತಿರುವ ಸುಮಾರು ಕುಟುಂಬಗಳು ಹೊಟ್ಟೆಗೆ ಊಟವಿಲ್ಲದೆ ಹಸಿವಿನಿಂದ ಮಲಗುತ್ತಿದ್ದಾರೆ. ಇತ್ತೀಚೆಗೆ ಮಹಿಳೆಯರು ಮದ್ಯಕ್ಕೆ ದಾಸರಾಗಿದ್ದಾರೆ. ಇದು ಮಿತಿ ಮೀರುವ ಮೊದಲೇ ಮದ್ಯ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಗ್ರಾಮದ ಪ್ರಮುಖರಾದ ಸತ್ಯಪ್ಪ ಭೋವಿ, ಯಮನೂರಪ್ಪ ಜೀರಾಳ, ಹನುಮಗೌಡ ಗೌಡ್ರ, ಸಣ್ಣ ಹನುಮಂತ, ಗ್ಯಾನಪ್ಪ ಬಿಳೆಬಾವಿ, ಕೃಷ್ಣ ಭೋವಿ, ಗ್ಯಾನಪ್ಪ ಜೀರಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net