ಪೊಲೀಸ್ ಗಸ್ತು ಹೆಚ್ಚಳಕ್ಕೆ ಕ್ರಮ

ಎಸ್ಪಿ ಸಾಹಿಲ್ ಬಾಗ್ಲಾ ಹೇಳಿಕೆ ಗಂಗಾವತಿಯಲ್ಲಿ ಜನಸಂಪರ್ಕ ಸಭೆ
ಗಂಗಾವತಿಯ ಐಎಂಎ ಹಾಲ್‌ನಲ್ಲಿ ಪೊಲೀಸ್ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಎಸ್ಪಿ ಸಾಹಿಲ್ ಬಾಗ್ಲಾ ಮಾತನಾಡಿದರು. ಎಎಸ್ಪಿ ಹೇಮಂತಕುಮಾರ, ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಇತರರಿದ್ದರು.
ಗಂಗಾವತಿಯ ಐಎಂಎ ಹಾಲ್‌ನಲ್ಲಿ ಪೊಲೀಸ್ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಎಸ್ಪಿ ಸಾಹಿಲ್ ಬಾಗ್ಲಾ ಮಾತನಾಡಿದರು. ಎಎಸ್ಪಿ ಹೇಮಂತಕುಮಾರ, ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಇತರರಿದ್ದರು.
Published on: 

ಗಂಗಾವತಿ: ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಗಸ್ತು ಬಿಗಿಗೊಳಿಸಲಾಗುತ್ತಿದೆ ಎಂದು ಎಸ್ಪಿ ಸಾಹಿಲ್ ಬಾಗ್ಲಾ ಹೇಳಿದರು.

ಐಎಂಎ ಹಾಲ್‌ನಲ್ಲಿ ಪೊಲೀಸ್ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ರಾತ್ರಿ ವೇಳೆ ಪಡ್ಡೆಹುಡುಗರ ಹಾವಳಿ ಹೆಚ್ಚುತ್ತಿರುವ ಬಗ್ಗೆ ಮಾಹಿತಿಯಿದ್ದು, ತಕ್ಷಣದಿಂದಲೇ ಬೀಟ್ ಸಂಖ್ಯೆ ಹೆಚ್ಚಿಸಲಾಗುವುದು. ಜನರ ಸುರಕ್ಷತೆಗಾಗಿ ಪೊಲೀಸರು ಬೈಕ್ ಸವಾರರಿಗೆ ದಂಡ ಹಾಕುತ್ತಿದ್ದು, ಆದಾಯ ಸಂಗ್ರಹಿಸುವ ಗುರಿಯಿಲ್ಲ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕೆಲ ಪ್ರದೇಶದಲ್ಲಿ ಏಕಮುಖ ಸಂಚಾರದ ಬಗ್ಗೆ ಪ್ರಸ್ತಾವನೆಯಿದ್ದು, ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಕೊಳೆಗೇರಿ ಪ್ರದೇಶದಲ್ಲಿ ಮದ್ಯ ಅಕ್ರಮ ಮಾರಾಟ, ಗಾಂಜಾ ವ್ಯಸನಿಗಳ ಉಪಟಳ ಬಗ್ಗೆ ದೂರುಗಳಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಠಾಣೆಯನ್ನು ಎಪಿಎಂಸಿ ಪ್ರಾಂಗಣದಿಂದ ಸ್ಥಳಾಂತರಿಸುವ ಬಗ್ಗೆ ಯೋಚಿಸಲಾಗಿದ್ದು, ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು. ಇಸ್ಪೀಟ್ ಮಟ್ಕಾ, ಮರಳು ಅಕ್ರಮ ಸಾಗಣೆ ಹಾವಳಿಗೆ ಕಡಿವಾಣ ಹಾಕಲಾಗುವುದು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಮುಂಬರುವ ದಿನಗಳಲ್ಲಿ ಸಭೆಯನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಲಾಗುವುದು ಎಂದರು.

ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಮಾತನಾಡಿ, ನಾಲ್ಕನೇ ಶನಿವಾರ ತಾಲೂಕುಮಟ್ಡದಲ್ಲಿ ಜನಸಂಪರ್ಕ ಸಭೆ ಆಯೋಜಿಸುವ ಬಗ್ಗೆ ಇಲಾಖೆ ಸೂಚನೆದ್ದು, ಜನರ ಅಹವಾಲು ಸ್ವೀಕರಿಸಲಾಗುವುದು. ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಯತ್ನಿಸಲಾಗುವುದು ಎಂದರು.

ರಾತ್ರಿ ಹೊತ್ತು ಹೆಚ್ಚುತ್ತಿರುವ ಕಿಡಿಗೇಡಿಗಳ ಹಾವಳಿ ನಿಯಂತ್ರಣ, ಬೈಕ ಸವಾರರಿಗೆ ಅನಗತ್ಯ ದಂಡ ಹಾಕುವುದನ್ನು ನಿಯಂತ್ರಿಸುವುದು ಸೇರಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ವಿವಿಧ ಸಮಾಜದ ಮುಖಂಡರು ಮನವಿ ಮಾಡಿದರು.

ಎಎಸ್ಪಿ ಹೇಮಂತಕುಮಾರ, ಪಿಐಗಳಾದ ಪ್ರಕಾಶ ಆರ್.ಯಾತನೂರ್, ರಂಗಪ್ಪ ಎಚ್.ದೊಡ್ಮನಿ, ಶಿವರಾಜ ಇಂಗಳದಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net