ಎಸ್‌ಐಆರ್ ವಿರೋಧಿಸಿ ಪಂಜಿನ ಮೆರವಣಿಗೆ

ಕುಷ್ಟಗಿಯ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಸಂಜೆ ಸಿಪಿಐಎಂ ಹಾಗೂ ಎಸ್‌ಡಿಪಿಐ ಸಹಯೋಗದೊಂದಿಗೆ ಪಂಜಿನ ಮೆರವಣಿಗೆ ನಡೆಯಿತು.
ಕುಷ್ಟಗಿಯ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಸಂಜೆ ಸಿಪಿಐಎಂ ಹಾಗೂ ಎಸ್‌ಡಿಪಿಐ ಸಹಯೋಗದೊಂದಿಗೆ ಪಂಜಿನ ಮೆರವಣಿಗೆ ನಡೆಯಿತು.
Published on: 

ಕುಷ್ಟಗಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವಿರೋಧಿಸಿ ಪಟ್ಟಣದಲ್ಲಿ ಶುಕ್ರವಾರ ಸಂಜೆ ಸಿಪಿಐಎಂ ಸೇರಿ ವಿವಿಧ ಸಂಘಟನೆಗಳಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.

ಮಲ್ಲಯ್ಯ ವೃತ್ತದಿಂದ ಆರಂಭವಾದ ಪಂಜಿನ ಮೆರವಣಿಗೆ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡಿತು. ಈ ವೇಳೆ ಸಿಪಿಐಎಂ ಪ್ರಮುಖರಾದ ಆರ್.ಕೆ. ದೇಸಾಯಿ, ಅಡಿವೆಪ್ಪ ನೆರೆಬೆಂಚಿ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಲ್ಲಿರುವ ಅರ್ಹ ಮತದಾರರ ಹೆಸರುಗಳು ಕೈಬಿಡಲಾಗುತ್ತಿದೆ. ಹೀಗಾಗಿ, ಪ್ರತಿಯೊಬ್ಬರೂ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಎಸ್‌ಡಿಪಿಐ ಮುಖಂಡ ಎಚ್.ಕೆ. ದೋಟಿಹಾಳ ಮಾತನಾಡಿದರು. ರೈತ ಸಂಘದ ಪ್ರಮುಖ ಹನುಮೇಶ ಶಾಖಾಪುರ, ರಾಮಣ್ಣ ಬಾವಿಕಟ್ಟಿ, ಸಿ.ಎಂ. ಹವಾಲ್ದಾರ್, ಸಂಗಮ್ಮ ಗುಳೆಗೌಡ್ರು, ಆನಂದ ಭೀಮೇಶ ಹಡಗಲಿ, ಅಕ್ಕಮ್ಮ ಮರೇಗೌಡರು, ಬಸವರಾಜ ಮೇಳಿ, ಹುಸೇನಸಾಬ್ ಕೊಳ್ಳಿ, ದೊಡ್ಡಪ್ಪ ಕೈಲವಾಡಗಿ, ಗಂಗಾಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net