ಯುವಜನತೆ ವ್ಯಾಪಾರ ಕ್ಷೇತ್ರಕ್ಕೆ ಮರಳಬೇಕು

ಕೊಪ್ಪಳ ಜಿಲ್ಲಾ ಆರ್ಯವೈಶ್ಯ ಸಮಾವೇಶವನ್ನು ಕರ್ನಾಟಕ ಆರ್ಯವೈಶ್ಯ ಮಹಾಸಭೆ ರಾಜ್ಯಾಧ್ಯಕ್ಷ ಆರ್​ಪಿ ರವಿಶಂಕರ್​ ಉದ್ಘಾಟಿಸಿದರು. ಪ್ರಮುಖರಾದ ನಾರಾಯಣ ಕುರುಗೋಡು, ಸಂತೋಫ್​ಿ ಕೆಲೋಜಿ, ರಾಘವೇಂದ್ರ ಬೆಲ್ಲಂಕೊಂಡಿ, ಶ್ರೀನಿವಾಸ್​ ಗುಪ್ತಾ, ರಾಘವೇಂದ್ರ ಪಾನಘಂಟಿ ಇದ್ದರು.
ಕೊಪ್ಪಳ ಜಿಲ್ಲಾ ಆರ್ಯವೈಶ್ಯ ಸಮಾವೇಶವನ್ನು ಕರ್ನಾಟಕ ಆರ್ಯವೈಶ್ಯ ಮಹಾಸಭೆ ರಾಜ್ಯಾಧ್ಯಕ್ಷ ಆರ್​ಪಿ ರವಿಶಂಕರ್​ ಉದ್ಘಾಟಿಸಿದರು. ಪ್ರಮುಖರಾದ ನಾರಾಯಣ ಕುರುಗೋಡು, ಸಂತೋಫ್​ಿ ಕೆಲೋಜಿ, ರಾಘವೇಂದ್ರ ಬೆಲ್ಲಂಕೊಂಡಿ, ಶ್ರೀನಿವಾಸ್​ ಗುಪ್ತಾ, ರಾಘವೇಂದ್ರ ಪಾನಘಂಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರ್​ಪಿ ರವಿಶಂಕರ್​ ಸೂಚನೆ
  • ಜಿಲ್ಲಾ ಆರ್ಯವೈಶ್ಯ ಸಮಾವೇಶ
ಕೊಪ್ಪಳ : ಆರ್ಯವೈಶ್ಯ ಸಮಾಜದ ಮೂಲ ಉದ್ಯೋಗವಾದ ವ್ಯಾಪಾರ ಕ್ಷೇತ್ರಕ್ಕೆ ಯುವಜನತೆ ಮತ್ತೆ ಮರಳಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭೆ ರಾಜ್ಯಾಧ್ಯಕ್ಷ ಆರ್​ಪಿ ರವಿಶಂಕರ್​ ಹೇಳಿದರು.
ನಗರದ ವಾಸವಿ ಮಂಗಲ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಆರ್ಯವೈಶ್ಯ ಸಮಾವೇಶದಲ್ಲಿ ಮಾತನಾಡಿದರು.
ಸಮಾಜದ ಆರ್ಥಿಕ ಬಲವರ್ಧನೆಗಾಗಿ ಯುವಕರು ಉದ್ಯಮ ಮತ್ತು ವ್ಯಾಪಾರ ಚಟುವಟಿಕೆಗಳಲ್ಲಿತೊಡಗಿಸಿಕೊಳ್ಳಬೇಕು. ಇದೇ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಆರ್ಯವೈಶ್ಯ ಸಮ್ಮೇಳನವನ್ನು ಆಯೋಜಿಸುತ್ತದೆ ಎಂದು ತಿಳಿಸಿದರು.

ಜಯಂತಿ ಸರ್ಕಾರಿ ಮಾನ್ಯತೆಗೆ ಆಗ್ರಹ

ಸಮಾವೇಶದಲ್ಲಿ ವಾಸವಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಹಾಗೂ ಆರ್ಯವೈಶ್ಯ ಸಮುದಾಯವನ್ನು ಒಬಿಸಿ ವರ್ಗಕ್ಕೆ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿ ಜಿಲ್ಲಾ ಸಮಿತಿ ಹಾಗೂ ಕೊಪ್ಪಳ ಅವೋಪಾ ಘಟಕದಿದ ರಾಜ್ಯಾಧ್ಯಕ್ಷ ಆರ್​ಪಿ ರವಿಶಂಕರ್​ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಆರ್ಯವೈಶ್ಯ ಮಹಾಸಭೆ ನಿರ್ದೇಶಕರಾದ ನಾರಾಯಣ ಕುರುಗೋಡು, ಸಂತೋಫ್​ಿ ಕೆಲೋಜಿ, ರಾಘವೇಂದ್ರ ಬೆಲ್ಲಂಕೊಂಡಿ, ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀನಿವಾಸ್​ ಗುಪ್ತಾ, ಜಿಲ್ಲಾ ಅವೋಪಾ ಘಟಕ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ಪ್ರಮುಖವಾದ ಅನಿಲ್​ ತಲ್ಲಮ್ಮ, ಎಚ್​.ಜೆ ಹನುಮಂತಯ್ಯ, ನಾಮ ನಾಗರಾಜ, ರಾಘವೇಂದ್ರ ಚಿತ್ರಾಲಿ, ರಾಕೇಶ್​ ಪಾನಘಂಟಿ, ಶೋಭಾ ಮಾದಿನೂರು, ಡಿ. ಗುರುರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net