ಯುವಕರು ಅಳಿವಿನಂಚಿನ ಕಲೆ ತಿಳಿಯಿರಿ

ಕೊಪ್ಪಳ ತಾಲೂಕಿನ ಮೋರನಹಳ್ಳಿ ಗ್ರಾಮದಲ್ಲಿ ಗದಗ ನ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಪಂಚಾಯತ ರಾಜ್ಯ ವಿಶ್ವ ವಿದ್ಯಾಲಯ ವತಿಯಿಂದ ನಡೆದ ಕ್ಷೇತ್ರ ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮಮ್ಮ ಶಿಳ್ಳಿಕ್ಯಾತರ ಚಾಲನೆ ನೀಡಿದರು. ಪ್ರಮುಖರಾದ ಕೇಶಪ್ಪ, ಭರಮಪ್ಪ, ಡಾ.ಲಿಂಗರಾಜ, ಸೋಮಲಿಂಗ ಕರ್ಣಿ, ಎಚ್​.ಪಕ್ಕಿರೇಶ, ನಾಗರಾಜ ಇದ್ದರು.
ಕೊಪ್ಪಳ ತಾಲೂಕಿನ ಮೋರನಹಳ್ಳಿ ಗ್ರಾಮದಲ್ಲಿ ಗದಗ ನ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಪಂಚಾಯತ ರಾಜ್ಯ ವಿಶ್ವ ವಿದ್ಯಾಲಯ ವತಿಯಿಂದ ನಡೆದ ಕ್ಷೇತ್ರ ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮಮ್ಮ ಶಿಳ್ಳಿಕ್ಯಾತರ ಚಾಲನೆ ನೀಡಿದರು. ಪ್ರಮುಖರಾದ ಕೇಶಪ್ಪ, ಭರಮಪ್ಪ, ಡಾ.ಲಿಂಗರಾಜ, ಸೋಮಲಿಂಗ ಕರ್ಣಿ, ಎಚ್​.ಪಕ್ಕಿರೇಶ, ನಾಗರಾಜ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಾವಿದ ಕೇಶಪ್ಪ ಮನವಿ
  • ತೊಗಲು ಗೊಂಬೆ ಆಟ
ಕೊಪ್ಪಳ: ಶ್ರಮ, ಸಂಸ್ಕತಿ, ಕುಲಕಸಬು, ಕೃಷಿ, ಕಲಾರಾಧನೆಗೆ ಮೋರನಹಳ್ಳಿ ಗ್ರಾಮ ಹೆಸರಾಗಿದೆ. ದೇಶ ವಿದೇಶದಲ್ಲೂ ಗಮನ ಸೆಳೆದ ಪ್ರತಿಭೆಗಳನ್ನು ಹೊಂದಿದೆ ಎಂದು ಗ್ರಾಮೀಣ ಅಭಿವೃದ್ಧಿ ಪಂಚಾಯತ ರಾಜ್ಯ ವಿಶ್ವ ವಿದ್ಯಾಲಯ ಉಪನ್ಯಾಸಕ ಡಾ.ಲಿಂಗರಾಜ ನಿಡುವಣಿ ಈಳಿಸಿದರು.
ತಾಲೂಕಿನ ಮೋರನಹಳ್ಳಿ ಗ್ರಾಮದಲ್ಲಿ ಗದಗಿನ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಪಂಚಾಯತ ರಾಜ್ಯ ವಿಶ್ವ ವಿದ್ಯಾಲಯ ವತಿಯಿಂದ ಸಮಾಜ ಕಾರ್ಯ ವಿಭಾಗದ (ಎಂ.ಎಸ್​.ಡಬ್ಲ್ಯೂ) ವಿದ್ಯಾರ್ಥಿಗಳಿಂದ ನಡೆದ ಕ್ಷೇತ್ರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮೋರನಹಳ್ಳಿ ಗ್ರಾಮವು ಜಿಲ್ಲೆಯಲ್ಲಿಯೇ ವಿಶೇಷ ಎನಿಸಿಕೊಂಡಿದೆ. ಕುಲುಕಸಬು, ಕಲಾ ಆರಾಧನೆಯ ಮೂಲಕ ಸಮುದಾಯವು ಅಭಿವೃದ್ಧಿಯಾಗುತ್ತಿದೆ. ವಿದ್ಯಾರ್ಥಿಗಳು ಸಮಾಜದೊಂದಿಗೆ ಬೆರೆತು ಕಲಿಕೆಯನ್ನು ಮುಂದುವರೆಸ ಬೇಕು. ಗ್ರಾಮೀಣ ಕಲೆಗಳು ನಮ್ಮ ಸಂಸ್ಕೃತಿ ಯ ಭಾಗವಾಗಿವೆ ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು ಎಂದರು.
ತೊಗಲು ಗೊಂಬೆ ಯಾಟದ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ ಮಾತನಾಡಿ, ತೊಗಲು ಗೊಂಬೆಯಾಟವನ್ನು ನಮ್ಮ ಪೂರ್ವಜರು ಮತ್ತು ನಾವು ಇಂದಿಗೂ ಕೂಡ ಪ್ರದರ್ಶನ ಮಾಡುತ್ತೇವೆ. ಅಳಿವಿನಂಚಿನಲ್ಲಿರುವ ಈ ಕಲೆಯ ಬಗ್ಗೆ ಯುವಕರಿಗೆ ತಿಳಿಸುತ್ತಿದ್ದೇವೆ. ದೇಶ ವಿದೇಶದಲ್ಲೂ ಪ್ರದರ್ಶನಗಳನ್ನು ನೀಡಿದ್ದೇವೆ ಎಂದರು.
ಸಾಹಿತಿ ಬಿ.ಎನ್​.ಹೊರಪೇಟಿ ಮಾತನಾಡಿ ಗ್ರಾಮವು ಕೃಷಿ ಪ್ರದಾನವಾಗಿದ್ದು ಶ್ರಮ ಸಂಸ್ಕೃತಿಯ ಮೂಲಕ ಜಿಲ್ಲೆಯಲ್ಲಿ ಮಾದರಿಯಾಗಿದೆ.ಪ್ರತಿ ಮನೆಯಲ್ಲೂ ಕಲಾವಿದರು ಮತ್ತು ಕಲಾ ಆರಾಧನೆ ಇದ್ದು ಶಿಕ್ಷಣದ ಮೂಲಕ ಗ್ರಾಮವು ಆರ್ಥಿಕವಾಗಿ ಮತ್ತು ಅಭಿವೃದ್ಧಿಯತ್ತ ಸಾಗುತ್ತಿದೆ,ವಿದ್ಯಾರ್ಥಿಗಳು ಓದಿನ ಜೊತೆಗೆ ತಮ್ಮಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು ಸಮಾಜದೊಂದಿಗೆ ಬೆರೆಯುವ ಕಾರ್ಯ ಮಾಡಬೇಕು ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮಮ್ಮ ಶಿಳ್ಳಿಕ್ಯಾತರ ಅವರಿಂದ ತೊಗಲು ಗೊಂಬೆಯಾಟದ ರಂಗ ಗೀತೆಗಳು ಮತ್ತು ರಾಮಾಯಣ ಮತ್ತು ಮಹಾ ಭಾರತದ ಕೆಲವು ಆಖ್ಯಾನಗಳನ್ನು ಸಂಭಾಫಿಣೆ ಹಾಗೂ ಹಾಡಿನೊಂದಿಗೆ ಗಮನಸೆಳೆದರು.
ನಂತರ ತೊಗಲುಗೊಂಬೆ ಕಲೆಯು ಬೆಳೆದು ಬಂದ ಹಿನ್ನಲೆ, ಆಚರಣೆ ಮತ್ತು ಕಲಾ ವೈಶಿಫ್ಟ್ಯಿತೆಯ ಬಗ್ಗೆ ತೊಗಲುಗೊಂಬೆ ಹಾಗೂ ಪ್ರದರ್ಶನದೊಂದಿಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ವಿದ್ಯಾರ್ಥಿಗಳು ಗ್ರಾಮದ ವಿವಿಧ ಸ್ಥಳಗಳಿಗೆ ಬೇಟಿನೀಡಿ ಸಾಧಕರ ಬಗ್ಗೆ ಕ್ಷೇತ್ರ ಕಾರ್ಯ ಮಾಡಿ ಮಾಹಿತಿ ತಿಳಿದುಕೊಂಡರು. ನಂತರ ಸಾಧಕರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಭೀಮಮ್ಮ, ಕೇಶಪ್ಪ, ಭರಮಪ್ಪ ತಿಗರಿ, ಡಾ.ಲಿಂಗರಾಜ ನಿಡುವಣಿ, ಸೋಮಲಿಂಗ ಕರ್ಣಿ, ಹೆಚ್​.ಪಕ್ಕಿರೇಶ, ನಾಗರಾಜ, ಚೇತನ, ಪ್ರದಿಪ್​, ಕೊಟ್ರೇಶ್​, ಮುತ್ತು ಹಾಗೂ ಸಾಮಾಜಿಕ ಕ್ಷೇತ್ರದ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net