ಕೊಪ್ಪಳದ ದದೇಗಲ್ನ ಜಿ.ಟಿ.ಟಿ.ಸಿ. ಕಾಲೇಜಿನಲ್ಲಿ ಅಂತರಾಷ್ಟ್ರೀಯ ದಿನಾಚರಣೆ ನಡೆಯಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಮೇಶ ತುಪ್ಪದ ಅಭಿಮತ
ಕೊಪ್ಪಳ: ಯುವಕರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಜತೆಗೆ ಸಮಾಜಮುಖಿ ಕಾರ್ಯ ಮಾಡುತ್ತಾ. ಹೆಚ್ಚಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳಿ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ನಿರ್ದೇಶಕ ರಮೇಶ ತುಪ್ಪದ ಹೇಳಿದರು.
ತಾಲೂಕಿನ ದದೇಗಲ್ನ ಜಿ.ಟಿ.ಟಿ.ಸಿ. ಕಾಲೇಜಿನಲ್ಲಿ ಶ್ರೀ ಸ್ವಾಮಿ ವಿವೇಕಾನಂದರ 164 ನೇ ಜಯಂತ್ಯೋತ್ಸವದ ಅಂಗವಾಗಿ ಅಂತರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕೊಪ್ಪಳ ರಾಮಕೃಷ್ಣ ಆಶ್ರಮದ ಪೂಜ್ಯ ಶ್ರೀ ಚೈತನ್ಯಾನಂದ ಸ್ವಾಮಿ ವಿದ್ಯಾರ್ಥಿಗಳಿಗೆ ವಿವೇಕಾನಂದರ ತತ್ವಾದರ್ಶನಗಳನ್ನು ಬೋಧಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಪರ್ವತಗೌಡ ಹಿರೇಗೌಡ್ರ ಅವರು ವಿದ್ಯಾರ್ಥಿಗಳಿಗೆ ಯುವ ಜನತೆಯ ಕುರಿತು ಜಾಗೃತಿ ಮೂಡಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಮೌನೇಶ ರಾಠೋಡ್ , ಪ್ರಾಂಶುಪಾಲ ಜಿ. ಪ್ರಭುರಾಜ, ರೆಡ್ ಕ್ರಾಸ್ ಸಂಸ್ಥೆಯ ಪಿ.ಆರ್.ಓ. ದೇವೆಂದ್ರಪ್ಪ ಹಿಟ್ನಾಳ, ಯುವ ರೆಡ್ ಕ್ರಾಸ್ ಸಂಯೋಜಕರಾದ ಗುದ್ನೇಶ ಭಾವಳ್ಳಿ, ಕಾಲೇಜಿನ ಬೋಧಕರು ಹಾಗೂ ವಿದ್ಯಾರ್ಥಿಗಳು, ಇ ದ್ದರು.