ಜನವರಿಯಲ್ಲಿ ಸಂಪುಟ ವಿಸ್ತರಣೆ

ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾದಲ್ಲಿ ಯೋಗ ಮತ್ತು ಧ್ಯಾನ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಶಂಕುಸ್ಥಾಪನೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಬಸವರಾಜ ತಳವಾರ್, ತಹಸೀಲ್ದಾರ್ ಪ್ರಕಾಶ ನಾತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ರಾಘವೇಂದ್ರಾಚಾರ್ ಜೋಷಿ ಇತರರಿದ್ದರು.
ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾದಲ್ಲಿ ಯೋಗ ಮತ್ತು ಧ್ಯಾನ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಶಂಕುಸ್ಥಾಪನೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಬಸವರಾಜ ತಳವಾರ್, ತಹಸೀಲ್ದಾರ್ ಪ್ರಕಾಶ ನಾತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ರಾಘವೇಂದ್ರಾಚಾರ್ ಜೋಷಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಸವರಾಜ ರಾಯರಡ್ಡಿ ಹೇಳಿಕೆ
  • ಯೋಗ - ಧ್ಯಾನ ಮಂದಿರಕ್ಕೆ ಶಂಕುಸ್ಥಾಪನೆ
ಯಲಬುರ್ಗಾ: ಚಿಕ್ಕವಂಕಲಕುಂಟಾದಲ್ಲಿ 28 ಕೋಟಿ ರೂ. ವೆಚ್ಚದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣ ಎಂದು ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಚಿಕ್ಕವಂಕಲಕುಂಟಾದಲ್ಲಿ ಶನಿವಾರ ಕೆಕೆಆರ್‌ಡಿಬಿ ಅನುದಾನದಡಿ 1.10ಕೋಟಿ ರೂ.ವೆಚ್ಚದಲ್ಲಿ ಯೋಗ ಮತ್ತು ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಭವನವು ಮಾರುತೇಶ್ವರ ಜಾತ್ರೆಯ ದಿನ ಉದ್ಘಾಟನೆಯಾಗಲಿದೆ. ಭವನದಲ್ಲಿ ಎಸ್ಸಿ, ಎಸ್ಟಿ ವರ್ಗದವರ ಮದುವೆ ಕಾರ್ಯಕ್ಕೆ 10 ಸಾವಿರ ರೂ., ಇತರರಿಗೆ 20 ಸಾವಿರ ರೂ. ನಿಗದಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಹಿರೇವಂಕಲಕುಂಟಾ ಗಾಣದಾಳ ಬೈಪಾಸ್ ರಸ್ತೆಗೆ ಭೂಸ್ವಾಧೀನ ಬಳಿಕ ವರ್ಷದೊಳಗೆ ಕಾಮಗಾರಿ ಪ್ರಾರಂಭವಾಗಲಿದೆ. ಹುಬ್ಬಳ್ಳಿ-ಕುಷ್ಟಗಿ ರೈಲು ಆರಂಭವಾಗಿದೆ. ಇನ್ನೊಂದು ರೈಲು ಸಂಚಾರ ಆರಂಭಿಸಲಾಗುವುದು. ಇನ್ನೆರಡು ವರ್ಷದಲ್ಲಿ ಕಲಬುರಗಿವರೆಗೆ ರೈಲು ಸಂಚಾರಕ್ಕೆ ಅನುಕೂಲ ಮಾಡಿ ಕೊಡುವುದಾಗಿ ತಿಳಿಸಿದರು.
ಕೃಷ್ಣಾ ಬಿ ಸ್ಕಿಮ್ ನೀರಾವರಿ ಯೋಜನೆ ಕುರಿತು ಮಂಗಳವಾರ ಸುವರ್ಣ ಸೌಧದ ಸದನದಲ್ಲಿ ಪ್ರಸ್ತಾವನೆ ಮಾಡುತ್ತೇನೆ. ತಾಲೂಕಿನ 36 ಕೆರೆ ತುಂಬಿಸಲು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ನಾನು ತೀರ್ಮಾನ ಮಾಡಲಾಗಿದೆ. ಸುಮ್ಮನೆ ನೀರಾವರಿ ಬಗ್ಗೆ ಭಾಷಣ ಮಾಡಿದರೆ ಸಾಲದು. ಶಾಸಕರಾದವರಿಗೆ ಕಾನೂನು, ಆಡಳಿತ ವ್ಯವಸ್ಥೆ ಗೊತ್ತಿರಬೇಕು. ಬಿಜೆಪಿಯವರು ಚುನಾವಣೆ ಬಂದಾಗ ಮಾತ್ರ ಭಾಷಣ ಮಾಡುತ್ತಾರೆ. ಸದನದಲ್ಲಿ ಖಾಲಿ ಭಾಷಣ ಮಾಡುವ ಬಿಜೆಪಿಗರಿಗೆ ಬೇರೆ ಕೆಲಸ ಇಲ್ಲ ಎಂದರು.
ಪ್ರಮುಖರಾದ ಮಹೇಶ ಹಳ್ಳಿ, ಆಶೋಕ ತೋಟದ, ರುದ್ರಪ್ಪ ಮರಕಟ್, ಕುಂಟೆಪ್ಪ ಕಂಬಳಿ, ಅಪ್ಪಣ್ಣ ಜೋತಿ, ಎಇಇ ಮಲ್ಲಿಕಾರ್ಜುನ, ಕೆಆರ್‌ಐಡಿಎಲ್ ಅನೀಲ್ ಪಾಟೀಲ್ ಇತರರಿದ್ದರು.
"

ಗ್ರಾಪಂ ಅಧ್ಯಕ್ಷರನ್ನು ಅವಿಶ್ವಾಸ ಮಾಡಿ ರಾಜೀನಾಮೆ ಕೊಡಿಸಿ ಬದಲಾಯಿಸಲು ಅಸಾಧ್ಯ. ಅಂಥದ್ದರಲ್ಲಿ ಸಿಎಂ ಬದಲಾವಣೆ ಸಾಧ್ಯನಾ?. ಜನವರಿಯಲ್ಲಿ ಮಂತ್ರಿಮಂಡಲದ ಸಂಪುಟ ವಿಸ್ತರಣೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net