15 ವರ್ಷಗಳಿಂದ ಅಯ್ಯಪ್ಪ ಸ್ವಾಮಿಗೆ ಪೂಜೆ

ಮಕರ ಸಂಕ್ರಾಂತಿ ನಿಮಿತ್ತ ಗಂಗಾವತಿ  ಶ್ರೀನೀಲಕಂಠೇಶ್ವರ ದೇವಾಲಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ವಿಶೇಷ ಪೂಜೆ ನಡೆಯಿತು. ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಇತರರಿದ್ದರು.
ಮಕರ ಸಂಕ್ರಾಂತಿ ನಿಮಿತ್ತ ಗಂಗಾವತಿ ಶ್ರೀನೀಲಕಂಠೇಶ್ವರ ದೇವಾಲಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ವಿಶೇಷ ಪೂಜೆ ನಡೆಯಿತು. ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಇತರರಿದ್ದರು.
Published on
ಗಂಗಾವತಿ: ನಗರದ ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಕುರಹಿನಶೆಟ್ಟಿ ಸಮಾಜದಿಂದ ಮಕರ ಸಂಕ್ರಾಂತಿ ನಿಮಿತ್ತ ಶ್ರೀ ಅಯ್ಯಪ್ಪ ಸ್ವಾಮಿ ವಿಶೇಷ ಪೂಜೆ ಬುಧವಾರ ಜರುಗಿತು.
ಶಬರಿಮಲೈನಲ್ಲಿ ಜ್ಯೋತಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಪೂಜೆ ಹಮ್ಮಿಕೊಳ್ಳಲಾಗುತ್ತಿದ್ದು, ಅನ್ನಸಂತರ್ಪಣೆ ನೆರವೇರಿಸಲಾಗುತ್ತಿದೆ. ಸಮಾಜದ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಐಲಿ ನಾರಾಯಣಪ್ಪ ಮಾತನಾಡಿ, ಸಮಾಜದಿಂದ 15 ವರ್ಷಗಳಿಂದ ಪೂಜೆ ನೆರವೇರಿಸಲಾಗುತ್ತಿದ್ದು, ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಪ್ರಾರ್ಥಿಸಲಾಗುತ್ತಿದೆ ಎಂದರು.
ಪೂಜೆ ಕುರಿತು ಅಯ್ಯಪ್ಪ ಸ್ವಾಮಿ ಸೇವಾ ಪ್ರತಿನಿಧಿ ತಾತಯ್ಯಸ್ವಾಮಿ ಮಾಹಿತಿ ನೀಡಿದರು. ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಸಮಾಜದ ಮುಖಂಡರಾದ ಏಳುಭಾವಿ ಕುಬೇರಪ್ಪ, ತಟ್ಟಿ ನಾಗಪ್ಪ, ಶ್ಯಾವಿ ತಿಪ್ಪಣ್ಣ, ಕುರಗೋಡು ಬಸವರಾಜ, ಮಾಂತಗೊಂಡ ರವೀಂದ್ರನಾಥ, ಎಂ.ಸರ್ವೇಶ, ಶಿರವಾರ ಲಕ್ಷ್ಮಣಪ್ಪ, ಐಲಿ ಚಂದ್ರಪ್ಪ, ಐಲಿ ಮಾರುತಿ, ವಿರೂಪಾಕ್ಷಪ್ಪ ಶಿರವಾರ, ಐಲಿ ಬಸವರಾಜ್, ಮಂಜುನಾಥ ಕುರುಗೋಡ, ಮಹಿಳಾ ಘಟಕದ ಗೌರವಾಧ್ಯಕ್ಷೆ ಸರೋಜಮ್ಮ ಮಲ್ಲಿಕಾರ್ಜುನ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net