ಹರಿದಾಸ ಸಂಕೀರ್ತನೆಗಳು ಪರಂಪರೆ ಬಿಂಬ

ಗಂಗಾವತಿ ತಾಲೂಕಿನ ಆನೆಗೊಂದಿಯ ಹುಚ್ಚಪ್ಪಯ್ಯನ ಮಠದಲ್ಲಿ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವದಲ್ಲಿ ಕಂಚಿ ಪೀಠದ ವಿಧ್ವಾನ್ ಪ್ರಶಾಂತ ಅಯ್ಯಂಗಾರ ನೇತೃತ್ವದ ತಂಡದಿಂದ ದಾಸವಾಣಿ ಭಾನುವಾರ ಕಾರ್ಯಕ್ರಮ ಜರುಗಿತು.
ಗಂಗಾವತಿ ತಾಲೂಕಿನ ಆನೆಗೊಂದಿಯ ಹುಚ್ಚಪ್ಪಯ್ಯನ ಮಠದಲ್ಲಿ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವದಲ್ಲಿ ಕಂಚಿ ಪೀಠದ ವಿಧ್ವಾನ್ ಪ್ರಶಾಂತ ಅಯ್ಯಂಗಾರ ನೇತೃತ್ವದ ತಂಡದಿಂದ ದಾಸವಾಣಿ ಭಾನುವಾರ ಕಾರ್ಯಕ್ರಮ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ರಾಜವಂಶಸ್ಥ ರಾಜಾ ಶ್ರೀಕೃಷ್ಣದೇವರಾಯ ಹೇಳಿಕೆ
ಗಂಗಾವತಿ: ತಾಲೂಕಿನ ಆನೆಗೊಂದಿಯ ಹುಚ್ಚಪ್ಪಯ್ಯನ ಮಠದಲ್ಲಿ ದಾಸಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಭಾನುವಾರ ನಡೆಯಿತು.
ದಾಸಸಾಹಿತ್ಯದ ಬಗ್ಗೆ ಅಭಿಪ್ರಾಯ ಗಣ್ಯರು ಅಭಿಪ್ರಾಯ ಹಂಚಿಕೊಂಡರಲ್ಲದೇ ಕಂಚಿ ಪೀಠದ ವಿಧ್ವಾನ್ ಪ್ರಶಾಂತ ಅಯ್ಯಂಗಾರ ನೇತೃತ್ವದ ತಂಡದಿಂದ ದಾಸವಾಣಿ ಕಾರ್ಯಕ್ರಮ ಜರುಗಿತು.
ರಾಜವಂಶಸ್ಥ ರಾಜಾ ಶ್ರೀಕೃಷ್ಣದೇವರಾಯ ಮಾತನಾಡಿ, ಹರಿದಾಸ ಸಂಕೀರ್ತನೆಗಳು ಪರಂಪರೆಯನ್ನು ಬಿಂಬಿಸುತ್ತಿದ್ದು, ಭಕ್ತಿ ಮಾರ್ಗಕ್ಕೆ ರಹದಾರಿಯಾಗಿದೆ ಎಂದರು. ನಂತರ ಭಜನೆ, ದಾಸವಾಣಿ ಮತ್ತು ದಾಸಸಾಹಿತ್ಯದ ವಿಮರ್ಶೆ ಕಾರ್ಯಕ್ರಮ ಜರುಗಿದವು. ಪ್ರಮುಖರಾದ ವಿದ್ಯಾ, ಆರ್.ಎಸ್.ನಂದಕುಮಾರ್, ಮೀರಾ ರಾಜಾರಾಂ, ಗೋಪಿರಂಜಿನಿ, ವೆಂಕಟೇಶ, ಎಸ್.ಪಿ.ಶೈಲಜಾ ಇತರರಿದ್ದರು.
ರಾಯರಮಠ: ನಗರದ ರಾಯರ ಮಠದಲ್ಲಿ ದಾಸ ಶ್ರೇಷ್ಠ ಪುರಂದರದಾಸರ ಆರಾಧನೆ ಮಹೋತ್ಸವ ಜರುಗಿತು. ದಾಸರ ಕುರಿತು ಪಂ.ವಾಗೀಶಚಾರ್ ಗೋರೆಬಾಳ್ ಉಪನ್ಯಾಸ ನೀಡಿದರು. ರಾಯರ ಮಠದಿಂದ ಶ್ರೀ ಸುಂಕದಕಟ್ಟೆ ಪ್ರಾಣದೇವರ ದೇವಾಲಯದವರಿಗೆ ಮಹಿಳಾ ಭಜನಾ ಮಂಡಳಿಯಿಂದ ಸಂಕೀರ್ತನೆಯೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು.
ನಗರಸಭೆ ಮಾಜಿ ಸದಸ್ಯ ವಾಸುದೇವ ನವಲಿ, ಪ್ರಮುಖರಾದ ಶ್ರೀನಿವಾಸ, ಶ್ಯಾಮಾಚಾರ್ ಉದ್ಯಾಳ್, ತಿರುಮಲರಾವ್, ಶ್ರೀನಿವಾಸ್ ದಾಸನಾಳ, ಪ್ರಲ್ಹಾದರಾವ್ ನವಲಿ, ರವಿಕುಮಾರ್ ಅಕ್ಬರ್, ಕಾರ್ತಿಕ್ ದಿಗ್ಗಾವಿ, ವತ್ಸಲಾಬಾಯಿ, ಕಾಳಿಂದಿನಿ ದೇಶಪಾಂಡೆ, ಸುಮಾ, ಅನಿತಾ ಬಾಯಿ ಅಯೋಧ್ಯ, ಸುಮಾ ಅಕ್ಬರ್, ಸುಜಾತಾ ಬಾಯಿ ಜಾಲಹಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net