ಅಂಗವಿಕಲರ ಕಾರ್ಯಾಗಾರಕ್ಕೆ ಚಾಲನೆ

ಕೊಪ್ಪಳದಲ್ಲಿ ಅಂಗವಿಕಲರ ಕ್ರೀಡಾಕೂಟದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ವಿಪ ಸದಸ್ಯೆ ಹೇಮಲತಾ ನಾಯಕ, ಎಡಿಸಿ ಸಿದ್ರಾಮೇಶ್ವರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಇದ್ದರು.
ಕೊಪ್ಪಳದಲ್ಲಿ ಅಂಗವಿಕಲರ ಕ್ರೀಡಾಕೂಟದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ವಿಪ ಸದಸ್ಯೆ ಹೇಮಲತಾ ನಾಯಕ, ಎಡಿಸಿ ಸಿದ್ರಾಮೇಶ್ವರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಛಲ ಇದ್ದರೆ ಸಾಧನೆ ಸಾಧ್ಯ
  • ಹೇಮಲತಾ ನಾಯಕ ಅಭಿಮತ

ಕೊಪ್ಪಳ: ವಿಕಲತೆ ಶಾಪಲ್ಲ. ಛಲ ಇದ್ದರೆ ಎಂಥ ಸಾಧನೆ ಬೇಕಾದರೂ ಮಾಡಬಹುದು ಎಂದು ವಿಧಾನ ಪರಿಷತ್​ ಸದಸ್ಯೆ ಹೇಮಲತಾ ನಾಯಕರ ಅಭಿಪ್ರಾಯಪಟ್ಟರು.

ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ವಿಶೇಷ ಚೇತನರಿಗೆ ಮೂರು ದಿನಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಗವಿಕಲತೆ ನೂನ್ಯತೆಯಲ್ಲ. ಅನೇಕರು ತಮ್ಮ ವಿಕಲತೆ ಮೆಟ್ಟಿನಿಂತು ಸಾಧನೆಗೈದಿದ್ದಾರೆ. ಎಲ್ಲರಲ್ಲೂ ವಿಶೇಷ ಶಕ್ತಿ ಅಡಗಿರುತ್ತದೆ. ದೇಹಕ್ಕೆ ಮಾತ್ರ ನೂನ್ಯತೆ ಕಾಡುತ್ತದೆ. ಮನಸ್ಸಿಗಲ್ಲ. ಅನೇಕ ಅಂಗವಿಕಲರು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗಿಯಾಗಿ ಸಾಧನೆ ಮೆರೆದಿದ್ದಾರೆ. ಮೂಢನಂಬಿಕೆ ತೊಡೆದು, ದಿವ್ಯಾಂಗರನ್ನು ಮುಖ್ಯವಾಹಿನಿಗೆ ತರಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮಾತನಾಡಿ, ಸಾಧನೆ ಆರಂಭಿಕ ಹಾದಿ ಕಷ್ಟ ಎನಿಸುತ್ತದೆ. ನಿರಂತರ ಪ್ರಯತ್ನ, ಕೌಶ ಅಳವಡಿಸಿಕೊಂಡು ಪ್ರಯತ್ನ ಮುಂದುವರೆಸಿದಲ್ಲಿ ಯಶಸ್ಸು ಒಲಿಯಲಿದೆ. ಪ್ರತಿಭೆ ಇದ್ದರೂ ಸರಿಯಾದ ಮಾರ್ಗದರ್ಶನ ಕೊರತೆಯಿಂದ ಹಲವರು ಹಿಂದುಳಿಯುತ್ತಾರೆ. ಅಂಥವರಿಗಾಗಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ತರಬೇತುದಾರರು ತರಬೇತಿ ನೀಡಲಿದ್ದು, ಸದುಪಯೋಗ ಪಡೆಯಿರಿ. ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಮಾತನಾಡಿ, ವಿಕಲಾಂಗರನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸಲು ಇಲಾಖೆ ಬದ್ಧ. ಹಲವು ಯೋಜನೆ ಪರಿಚಯಿಸಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ತರಬೇತಿ ಹಾಗೂ ಮೈದಾನ ಬಳಕೆಗೆ ಮುಕ್ತ ಅವಕಾಶ ಕಲ್ಪಿಸಿದ್ದೇವೆ. ಆಗು ನೀ ಅನಿಕೇತನ ೌಂಡೇಶನ್​ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಕರೆಸಿ ನೇರ ಸಂದರ್ಶನ ಮಾಡಿಸುತ್ತಿದ್ದೇವೆಂದು ತಿಳಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ಆಗು ನೀ ಅನಿಕೇತನ ೌಂಡೇಶನ್​ ಸಿಇಒ ಧರಣಿ ಬಿ.ಸಸಿ, ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ರಾಘವೇಂದ್ರ ಆರ್​. ಅನ್ವೇಕರ್​, ರಾಘವೇಂದ್ರ ಪಿ., ಶ್ರೀಧರ ನಾಗಪ್ಪ ಮಾಳಗಿ, ಬಿ.ಆನಂದಕುಮಾರ, ಆರ್​.ರಾಮಚಂದ್ರ, ಎಸ್​.ಆರ್​.ಶಿಂದೇ, ತಾಲ್ಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net