ಹಿಂದೂ ಸಮಾಜದ ಉನ್ನತಿಗೆ ಶ್ರಮಿಸಿ

ಗಂಗಾವತಿ ಶಾರದಾನಗರದ ಶ್ರೀಶಾರದಾ ದೇವಾಲಯದ ಆವರಣದಲ್ಲಿ ಹಿಂದೂ ಸಮ್ಮೇಳನ ಸಮಿತಿಯಿಂದ  ಹಮ್ಮಿಕೊಂಡ ವಿರಾಟ ಹಿಂದೂ ಸಮ್ಮೇಳನ ನಿಮಿತ್ತ ಭಾರತ ಮಾತೆ ಭಾವಚಿತ್ರದ ಮೆರವಣಿಗೆ ನಡೆಯಿತು. ಕಲ್ಮಠದ ಕೊಟ್ಟೂರು ಸ್ವಾಮೀಜಿ, ಮಾಜಿ ಶಾಸಕ ಪರಣ್ಣಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮೇಗೌಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ  ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಹ ಕಾರ್ಯದರ್ಶಿ
  • ಹೇಳಿಕೆ
  • ಸಮ್ಮೇಳನ
ಗಂಗಾವತಿ: ಹಿಂದುತ್ವದ ಪುನಶ್ಚೇತನಕ್ಕಾಗಿ ಸಮ್ಮೇಳನಗಳು ಅಗತ್ಯವಾಗಿದ್ದು, ಹಿಂದೂಗಳು ಜಾಗೃತಗೊಂಡಾಗ ಮಾತ್ರ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ವಿನಾಯಕ ತಲಗೇರಿ ಹೇಳಿದರು.
ನಗರದ ಶಾರದಾನಗರದ ಶ್ರೀಶಾರದಾ ದೇವಾಲಯದ ಆವರಣದಲ್ಲಿ ಹಿಂದೂ ಸಮ್ಮೇಳನ ಸಮಿತಿಯಿಂದ ಶನಿವಾರ ಹಮ್ಮಿಕೊಂಡ ವಿರಾಟ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದರು.
ಹಿಂದುತ್ವದ ಅಂತಃಕರಣ ಬತ್ತಿ ಹೋಗಿದ್ದು, ಸ್ವಾಭಿಮಾನ ಜಾಗೃತಿಳಿಗೊಳಿಸಬೇಕಿದೆ. ಹಿಂದೂ ಬದುಕಿರುವರಿಗೂ ಹಿಂದೂಸ್ಥಾನವಾಗಿ ಉಳಿಯಲಿದ್ದು, ಸಮಾಜದ ಉನ್ನತಿ ಮತ್ತು ಅವನತಿ ಹಿಂದೂಗಳ ಮೇಲೆ ಅವಲಂಭಿತವಾಗಿದೆ ಎಂದರು.
ಸಮಿತಿ ನಗರ ಸಂಯೋಜಕ ಡಾ.ಕೆ.ಅಮರೇಶ ಪಾಟೀಲ್ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಕಲಿಸಬೇಕಿದ್ದು, ಹಿಂದೂ ಸಮಾಜ ಜಾಗೃತಗೊಳ್ಳಲು ಪಾಲಕರ ಶ್ರಮ ಸಾಕಷ್ಟಿದೆ ಎಂದರು.
ಇದಕ್ಕೂ ಮುನ್ನ ನಗರದ ಕಲ್ಮಠದಿಂದ ವೇದಿಕೆಯವರಿಗೆ ಭಾರತ ಮಾತೆ ಭಾವಚಿತ್ರದ ಮೆರವಣಿಗೆ ನೆರವೇರಿಸಲಾಯಿತು. ದಾರ್ಶನಿಕರ ವೇಷಭೂಷಣದೊಂದಿಗೆ ಮಕ್ಕಳು ಭಾಗವಹಿಸಿದ್ದರು. ಇರಕಲ್‌ಗಡಾ ವೀರ ಸಾವರ್ಕರ್ ಎಕ್ರೋಬಿಟೀಕ್ಸ್ ತಂಡದಿಂದ ಪಿರಾಮಿಡ್ ಮತ್ತು ಮಹಿಳಾ ಭಜನಾ ಮಂಡಳಿಯಿಂದ ಕೋಲಾಟ ಪ್ರದರ್ಶನ ನಡೆಯಿತು.
ಚಿಕ್ಕಬೊಮ್ಮನಾಳ ಹಿರೇಮಠದ ಭ್ರಮರಾಂಭ ಸಮೇತ ಮಲ್ಲಿಕಾರ್ಜುನ ಸ್ವಾಮಿ ಆಶ್ರಮದ ರುದ್ರಮುನಿ ಸ್ವಾಮೀಜಿ, ಸಮಿತಿ ಅಧ್ಯಕ್ಷೆ ಕಾಂಚಿಕಾರಾಣಿ ರಾಯ್ಕರ್, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net