ಕೊಪ್ಪಳದಲ್ಲಿ ಮಹಿಳಾ ದಿನಾಚರಣೆ

ಕೊಪ್ಪಳದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯನ್ನು ಪದ್ಮಶ್ರೀ ಪುರಸತ ಮಂಜಮ್ಮ ಜೋಗತಿ ಉದ್ಘಾಟಿಸಿದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ವಾಣಿಶ್ರೀ ಮಠದ, ಜಿಲ್ಲಾಧ್ಯಕ್ಷೆ ರತ್ನಾ ಕುಮಾರಿ, ನಗರ ಮಂಡಲ ಅಧ್ಯಕ್ಷೆ ಜಯಶ್ರೀ ಆರೇರ, ಉಪಾಧ್ಯಕ್ಷೆಯರಾದ ವೀಣಾ ಬನ್ನಿಗೋಳ, ಗೀತಾ ಮುತ್ತಾಳ ಇದ್ದರು.
ಕೊಪ್ಪಳದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯನ್ನು ಪದ್ಮಶ್ರೀ ಪುರಸತ ಮಂಜಮ್ಮ ಜೋಗತಿ ಉದ್ಘಾಟಿಸಿದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ವಾಣಿಶ್ರೀ ಮಠದ, ಜಿಲ್ಲಾಧ್ಯಕ್ಷೆ ರತ್ನಾ ಕುಮಾರಿ, ನಗರ ಮಂಡಲ ಅಧ್ಯಕ್ಷೆ ಜಯಶ್ರೀ ಆರೇರ, ಉಪಾಧ್ಯಕ್ಷೆಯರಾದ ವೀಣಾ ಬನ್ನಿಗೋಳ, ಗೀತಾ ಮುತ್ತಾಳ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಶುದ್ಧ ಮನಸ್ಸಿನಿಂದ ಕಾಯಕ ಮಾಡಿ
  • ಮಂಜಮ್ಮ ಜೋಗತಿ ಸಲಹೆ
ಕೊಪ್ಪಳ: ಪರಿಶುದ್ಧ ಮನಸ್ಸಿನಿಂದ ಕಾಯಕದಲ್ಲಿ ತೊಡಗಿದಾಗ ಯಶಸ್ಸು ನಮ್ಮನ್ನು ಅರಸಿ ಬರುತ್ತದೆ ಎಂದು ಪದ್ಮಶ್ರೀ ಪುರಸತ ಮಂಜಮ್ಮ ಜೋಗತಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಷ್ಟ-ಸುಖ ಸಮಾನವಾಗಿ ಕಾಣಿ. ರಾಜಕೀಯ, ವಿಜ್ಞಾನ, ಕಲೆ, ಸಾಹಿತ್ಯ ಎಲ್ಲ ವಲಯಗಳಲ್ಲಿ ಮಹಿಳೆಯರಿಗೆ ಸಮಪಾಲು ಸಿಗುತ್ತಿದೆ. ಮಹಿಳೆಯರ ಸಾಧನೆ ಆಡಿಕೊಳ್ಳುವ ಬದಲು ಪ್ರೋತ್ಸಾಹಿಸಿ. ಒಂದು ಹೆಣ್ಣು ಮತ್ತೊಂದು ಹೆಣ್ಣನ್ನು ಗೌರವದಿಂದ ಕಾಣಬೇಕು. ತನಗೆ ಏನೂ ಬೇಡದೆ, ತನ್ನವರಿಗಾಗಿ ಎಲ್ಲ ಬೇಡಿಕೊಳ್ಳುವ ಗುಣ ಹೆಣ್ಣಿಗೆ ಹುಟ್ಟಿನಿಂದ ಬಂದಿದೆ. ಹೆಣ್ಣನ್ನು ತಾಯಿ, ಭೂಮಿ, ನದಿಗಳೆಂದು ಪೂಜಿಸುವ ದೇಶ ನಮ್ಮದು.
ಸರ್ಕಾರಿ ಹುದ್ದೆಗಳಲ್ಲಿ ಶೇ.1ರಷ್ಟು ಮೀಸಲು ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಿದ್ದು ಸ್ವಾಗತಾರ್ಹ. ಕೇಂದ್ರ ಜಾರಿಗೆ ತರಲು ಹೊರಟಿರುವ ಲಿಂಗತ್ವ ಅಲ್ಪಸಂಖ್ಯಾತರ ಮಸೂದೆಯಲ್ಲಿ ಅರ್ಧಕ್ಕಿಂತ ಹೆಚ್ಚು ನಿಯಮ ನಮ್ಮ ಅಭಿವೃದ್ಧಿಗೆ ವಿರುದ್ಧವಾಗಿವೆ. ರಾಜ್ಯಾದ್ಯಂತ ಹೋರಾಟ ನಡೆಯುತ್ತಿದ್ದು ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದರು.
ಅಳವಂಡಿ ಪ್ರಗತಿಪರ ರೈತ ಮಹಿಳೆ ಸುನಂದಮ್ಮ ಗದ್ದೀಕೇರಿ, ಗಿಣಿಗೇರಾ ಗ್ರಾಪಂ ಮಾಜಿ ಸದಸ್ಯೆ ಶಶಿಕಲಾ ಗೋಡೇಕರ, ಕಾಯಕಜೀವಿ ಶಾರದಾ ಬಡಿಗೇರ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ವಾಣಿಶ್ರೀ ಮಠದ, ಜಿಲ್ಲಾಧ್ಯಕ್ಷೆ ರತ್ನಾ ಕುಮಾರಿ, ನಗರ ಮಂಡಲ ಅಧ್ಯಕ್ಷೆ ಜಯಶ್ರೀ ಆರೇರ, ಉಪಾಧ್ಯಕ್ಷೆಯರಾದ ವೀಣಾ ಬನ್ನಿಗೋಳ, ಗೀತಾ ಮುತ್ತಾಳ, ಶೈಲಜಾ, ಕೀರ್ತಿ ಪಾಟೀಲ, ನಗರ ಮಂಡಲ ಅಧ್ಯಕ್ಷ ಅಮರೇಶ, ಗ್ರಾಮೀಣ ಮಂಡಲ ಅಧ್ಯಕ್ಷ ವೀರೇಶ್​ ಸಜ್ಜನ್​, ಮಹಾಲಕ್ಷಿ$್ಮ ಕಂದಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net