ಸ್ವಚ್ಛ ಭಾರತ ಸಾಕಾರದಲ್ಲಿ ಮಹಿಳೆ ಪಾತ್ರ ಅನನ್ಯ

ಕಾರಟಗಿಯ ಪುರಸಭೆಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ನಾರಿಯಿಂದ ಸ್ವಚ್ಛತೆಗೆ ಮುನ್ನುಡಿ ಕಾರ್ಯಕ್ರಮದಲ್ಲಿ ಮಹಿಳಾ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.   ಉಪಾಧ್ಯಕ್ಷೆ ಸುಜಾತ ನಾಗರಾಜ, ಸೀಮಾ, ಆರೋಗ್ಯ ನಿರೀಕ್ಷಕರಾದ ಅಕ್ಷತಾ, ಮಲ್ಲಮ್ಮ, ಇಂಜಿನಿಯರ್ ಭಾರ್ಗವಿ ಇದ್ದರು.

Published on
ಕಾರಟಗಿ: ಸ್ವಚ್ಛತೆಗಾಗಿ ನಡೆಸುವ ಪ್ರತಿ ಕೆಲಸದಲ್ಲಿಯೂ ಮಹಿಳೆ ಸಮಾಜಕ್ಕೆ ಮಾದರಿಯಾಗಿ ನಿಲ್ಲಲಿದ್ದು, ಸ್ವಚ್ಛ ಭಾರತದ ಸಂಕಲ್ಪ ಸಾಕಾರಕ್ಕೆ ಮಹಿಳೆಯರ ಪಾತ್ರ ಅನನ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ನಾರಿಯಿಂದ ಸ್ವಚ್ಛತೆಗೆ ಮುನ್ನುಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ನಡೆಸುವ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವವಾಗಿದೆ ಎಂದರು.
ಪುರಸಭೆ ಉಪಾಧ್ಯಕ್ಷೆ ಸುಜಾತ ನಾಗರಾಜ ಮಾತನಾಡಿ, ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗೌರವಿಸುವ, ಸಮಾನತೆಗಾಗಿ ಹೋರಾಡುವ ಮತ್ತು ಮಹಿಳಾ ಸಬಲೀಕರಣ ಉತ್ತೇಜಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಮುನ್ನಡೆಯಬೇಕಿದೆ ಎಂದರು.
ನಂತರ ಸ್ವಚ್ಛತೆಗೆ ಶ್ರಮಿಸುವ ಉತ್ತಮ ಮಹಿಳಾ ಪೌರಕಾರ್ಮಿಕರನ್ನು ಹಾಗೂ ನಾನಾ ವಲಯಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯರಾದ ದೇವಮ್ಮ, ಪದ್ಮಾವತಿ, ಜಿ.ಅರುಣಾದೇವಿ, ಕಂದಾಯ ಅಧಿಕಾರಿ ಸೀಮಾ, ಆರೋಗ್ಯ ನಿರೀಕ್ಷಕರಾದ ಅಕ್ಷತಾ, ಮಲ್ಲಮ್ಮ, ಇಂಜಿನಿಯರ್ ಭಾರ್ಗವಿ, ಜಯಮ್ಮ, ರಮ್ಯ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net