ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ

ಕೊಪ್ಪಳದ ಟೀಚರ್ಸ್ ಕಾಲನಿಯ ಸುಮೇದಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಹ್ಯಾಂಡ್ ಎಂಬ್ರಾಯಿಡರಿ ಮತ್ತು ಆರಿ ವರ್ಕ್ ಉಚಿತ ತರಬೇತಿ ಸವಾರೋಪ ಕಾರ್ಯಕ್ರಮದಲ್ಲಿ ಸುಮೇದಾ ಸಂಸ್ಥೆ ಅಧ್ಯಕ್ಷೆ ಸಾಧನಾ ವಾತನಾಡಿದರು. ಬಿವಿಟಿಯ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್, ಕೊಪ್ಪಳ ಇನ್ನರ್ ವಿಲ್ ಲೇಡೀಸ್ ಕ್ಲಬ್ ಅಧ್ಯಕ್ಷೆ ಸುನಿತಾ, ಕಾರ್ಯದರ್ಶಿ ರವಾ, ತರಬೇತುದಾರ ಸುತೇಜ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸವಾರೋಪ ಕಾರ್ಯಕ್ರಮದಲ್ಲಿ

ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ

ಕೊಪ್ಪಳ: ಮಹಿಳೆಯರು ತರಬೇತಿಯಲ್ಲಿ ಕಲಿತ ಕೌಶಲಗಳನ್ನು ಕಲಿಕೆಗೆ ಸೀಮಿತಗೊಳಿಸದೆ ವೃತ್ತಿಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಭಾರತೀಯ ವಿಕಾಸ ಟ್ರಸ್ಟ್ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಹೇಳಿದರು.
ನಗರದ ಟೀಚರ್ಸ್ ಕಾಲನಿಯ ಸುಮೇದಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ 10 ದಿನಗಳ ಹ್ಯಾಂಡ್ ಎಂಬ್ರಾಯಿಡರಿ ಮತ್ತು ಆರಿ ವರ್ಕ್ ಉಚಿತ ತರಬೇತಿ ಸವಾರೋಪ ಕಾರ್ಯಕ್ರಮದಲ್ಲಿ ವಾತನಾಡಿದರು. ಸಲ್ಲಿಕೆಯಾಗಿದ್ದ 100 ಅರ್ಜಿಗಳಲ್ಲಿ 30 ಅರ್ಹರನ್ನು ಆಯ್ಕೆ ವಾಡಿ 10 ದಿನಗಳ ಕಾಲ ತರಬೇತಿ ನೀಡಲಾಗಿದೆ.
ಟೈಲರಿಂಗ್ ಜ್ಞಾನ ಇರುವವರಿಗೆ ಈ ತರಬೇತಿ ಹೆಚ್ಚು ಸಹಕಾರಿಯಾಗಿದ್ದು, ಮಹಿಳೆಯರು ಆರಿ ವರ್ಕ್ ಬೇಸಿಕ್ ಅಂಶಗಳನ್ನು ಯಶಸ್ವಿಯಾಗಿ ಕಲಿತಿದ್ದಾರೆ ಎಂದರು.
ಸುಮೇದಾ ಸಂಸ್ಥೆಯ ಅಧ್ಯಕ್ಷೆ ಸಾಧನಾ ವಾತನಾಡಿ, ಆನ್‌ಲೈನ್ ಅಥವಾ ಯೂಟ್ಯೂಬ್ ನೋಡಿ ಕಲಿಯುವುದಕ್ಕಿಂತ ಪ್ರಾಯೋಗಿಕ ಕಲಿಕೆ ಹೆಚ್ಚು ಪರಿಣಾಮಕಾರಿ. ಹೊರಗಡೆ ಒಂದು ಬ್ಲೌಸ್ ಡಿಸೈನ್‌ಗೆ 3000 ರೂ.ವರೆಗೂ ದರವಿದೆ. ಈ ಕಲೆ ಕರಗತ ವಾಡಿಕೊಂಡರೆ ಮಹಿಳೆಯರು ಮನೆಯಲ್ಲೇ ಕುಳಿತು ಹಣ ಸಂಪಾದಿಸಬಹುದು ಎಂದು ತಿಳಿಸಿದರು.
ಕೊಪ್ಪಳ ಇನ್ನರ್ ವಿಲ್ ಲೇಡೀಸ್ ಕ್ಲಬ್ ಅಧ್ಯಕ್ಷೆ ಸುನಿತಾ, ಕಾರ್ಯದರ್ಶಿ ರವಾ, ತರಬೇತುದಾರ ಸುತೇಜ, ಪ್ರಮುಖರಾದ ಅಶ್ವಿನಿ, ಸವಿತಾ, ನೀಲಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net