ಕುಷ್ಟಗಿ ತಾಲೂಕಿನ ಹಿರೇತೆಮ್ಮಿನಾಳ ಗ್ರಾಮದ ನಿವಾಸಿ ಗ್ಯಾನಪ್ಪ ಕುರಿ ನನ್ನ ಗಂಡನು ಫೆ. 21 ರಂದು ಮೃತನಾಗಿದ್ದು. ಅದು ಆಕಸ್ಮಿಕ ಸಾವಲ್ಲ. ಅದು ಕೊಲೆಯಾಗಿದೆ. ಕಳೆದ ಗ್ರಾಂಪಂ ಚುನಾವಣೆಯಲ್ಲಿ 3 ಮತಗಳಿಂದ ಸೋತಿದ್ದ ನನ್ನ ಪತಿ, ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಸಿದ್ಧರಾಗಿದ್ದರು. ಇದನ್ನು ಸಹಿಸದ ಎದುರಾಳಿಗಳು ಅವರನ್ನು ಕೊಲೆ ಮಾಡಿದ್ದಾರೆ. ಶವದ ಮುಖದ ಮೇಲೆ ಕಲ್ಲಿನಿಂದ ಜಜ್ಜಿದ ಗಾಯಗಳಿದ್ದು, ಕಾಲು ಮುರಿದು ಗುಂಡಿಯಲ್ಲಿ ತುರುಕಲಾಗಿದೆ. ಪೋಲಿಸ್ ಠಾಣೆಗೆ ಹೋದರೆ ಅಧಿಕಾರಿಗಳು ನಮ್ಮನ್ನು ಅವಮಾನಿಸುತ್ತಿದ್ದಾರೆ. ಸಾಕ್ಷಿ ತನ್ನಿ ಎಂದು ಗದರಿಸುವುದಲ್ಲದೆ, ಕಾಯಿ-&ಕುಂಕುಮ ತನ್ನಿ ಎಂದು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಅವರು ನೋವು ತೋಡಿಕೊಂಡರು.