ನಗರದ ಮಹೆಬೂಬ್ ನಗರದ ನಿವಾಸಿ ರುಬೀನಾ (25) ಮೃತ ಯುವತಿ. ತೀವ್ರ ಗಾಯಗೊಂಡ ಅಯೇಷಾ ಮತ್ತು ಮಿನಿಯಾಜ್‌ರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್‌ಗೆ ರವಾನಿಸಲಾಗಿದೆ. ನಗರದ ಖಾಜಾಬೀ, ಮಹಾಬೀ, ಮುಜ್ನಿ, ಸುಮೇಯಾ, ಆಯೇಷಾ ಬೇಗಂ, ರಂಜಾನ್ ಬೀ, ಸಾಜೀಯಾ, ರಹೇಮತ್ ಬಿ, ಮಹೇಬೂಬಿ, ತಾಹೇರಾ, ಮಹೆಬೂಬ, ರಸೂಲಸಾಬ, ಖಾಸೀಂಸಾಬ ಆಟೋ ಚಾಲಕ ಹಿರೇಭೀಮಪ್ಪ ಗಾಯಗೊಂಡಿದ್ದು, ನಗರ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ರಂಜಾನ್ ಹಬ್ಬದಲ್ಲಿ ಮೊದಲ ಬಾರಿಗೆ ವ್ರತ ಕೈಗೊಳ್ಳುವ ಕುಟುಂಬ ಸದಸ್ಯರಿಗೆ ಹೂವು ಮುಡಿಸುವ ಸಂಪ್ರದಾಯವಿದ್ದು, ಅದಕ್ಕಾಗಿ ಗಂಗಾವತಿಯ ಒಂದೇ ಕುಟುಂಬಕ್ಕೆ ಸೇರಿದವರು ಎರಡು ಆಟೋಗಳಲ್ಲಿ ಕೊಪ್ಪಳಕ್ಕೆ ತೆರಳುತ್ತಿದ್ದರೆನ್ನಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.