ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳದಲ್ಲಿ ಶ್ರೀ ಗಾಳಿ ದುರ್ಗಮ್ಮ ದೇವಿ ಜಾತ್ರೆ ಅದ್ದೂರಿಯಾಗಿ ನಡೆಯಿತು. ಪ್ರಮುಖರಾದ ಬಸವರಾಜ, ರಾಮಣ್ಣ, ರಣದಪ್ಪ, ಹುಲಗಪ್ಪ, ಚಿರಂಜೀವಿ, ಹನುಮಂತ ಇತರರಿದ್ದರು.
ಅಳವಂಡಿ: ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಶ್ರೀ ಗಾಳಿ ದುರ್ಗಮ್ಮ ದೇವಿ ಜಾತ್ರೆ ಬುಧವಾರ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ ದೇವಿಗೆ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಭಕ್ತರು ದೇವಿಗೆ ವಿಶೇಷ ಪೂಜೆ, ಉಡಿ ತುಂಬಿ, ನೈವೇದ್ಯ ಅರ್ಪಿಸಿ ಹರಕೆ ಸಲ್ಲಿಸಿದರು. ನಂತರ ದಾಸೋಹ ಸೇವೆ ನಡೆಯಿತು. ಮಧ್ಯಾಹ್ನ ಮಹಿಳೆಯರ ಕಳಸ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ದೇವಿ ಮೂರ್ತಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಸೀಮಾ ಸರಹದ್ದಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.